ಸುಭಾಷ ಅಧ್ಯಕ್ಷ, ಪ್ರಭು ಉಪಾಧ್ಯಕ್ಷ

3
ಚಿಕ್ಕೋಡಿ ಶ್ರೀ ಪ್ರಭುದೇವ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು. ಸುಭಾಷ ಕವಲಾಪುರೆ, ಪ್ರಭು ಬೆಲ್ಲ, ಮಹೇಶ ಭಾತೆ, ನೀಲಕಂಠ ವಂಟಮುತ್ತೆ, ಮಹೇಶ್ವರ ಹಿರೇಮಠ ಇತರರಿದ್ದರು.
Published on

ಚಿಕ್ಕೋಡಿ: ಪಟ್ಟಣದ ಶ್ರೀ ಪ್ರಭುದೇವ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಸಹಕಾರಿ ಸಂಸ್ಥಾಪಕ ಸುಭಾಷ ಕವಲಾಪುರೆ, ಉಪಾಧ್ಯಕ್ಷರಾಗಿ ಪ್ರಭು ಬೆಲ್ಲದ ಶುಕ್ರವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಅಪ್ಪಾಜಿಗೋಳ ತಿಳಿಸಿದ್ದಾರೆ.

ನಿರ್ದೇಶಕರಾಗಿ ಮಹೇಶ ಭಾತೆ, ನೀಲಕಂಠ ವಂಟಮುತ್ತೆ, ಮಹೇಶ್ವರ ಹಿರೇಮಠ, ಸಂಗಪ್ಪ ಹಂಪನ್ನವರ, ಸತೀಶ ನೂಲಿ, ಕುಮಾರ ಮದನ್ನವರ, ಸಂಜೀವ ಹಿರೇಮಠ, ಶೋಭಾ ಹಾಗರಗಿ, ಕಾಂಚನ ದೊಡಮನಿ, ಇರಶಾದ್ ಇಪ್ಪೇರಿ, ಸದಾಶಿವ ಮಾಳಿ, ಶಂಕರ ಮೇದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ಸಚಿನ ಮಗದುಮ್ಮ ಮಾತನಾಡಿ, 2023-24ನೇ ಸಾಲಿನಲ್ಲಿ 28.73 ಲಕ್ಷ ರೂ.ಷೇರು ಬಂಡವಾಳ 34.41 ಲಕ್ಷ ರೂ. ಕಾಯ್ದಿಟ್ಟ ಮತ್ತು ಇತರ ನಿಧಿ, 15.60 ಕೋಟಿ ರೂ. ಠೇವಣಿ ಸಂಗ್ರಹಿಸಿದೆ. 7.72 ಕೋಟಿ ರೂ. ಸಾಲ ವಿತರಣೆ ಮಾಡಿದೆ. 8.62 ಕೋಟಿ ರೂ. ಗುಂತಾವನೆ, 18.22 ಲಕ್ಷ ರೂ.ಲಾಭ ಗಳಿಸಿದೆ. 16.27 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net