ಸ್ವಸಹಾಯ ಗುಂಪುಗಳು ಮಹಿಳಾ ಸಬಲೀಕರಣಕ್ಕೆ ಪೂರಕ

UDGHATANE
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರ ಗೋಷ್ಠಿ ಮತ್ತು ಪ್ರತಿಭಾ ಸಂಭ್ರಮ ಕಾರ್ಯಕ್ರಮವನ್ನು ರಾಜವಂಶಸ್ಥೆ ಲಲಿತಾರಾಣಿರಾಯಲು ಶನಿವಾರ ಉದ್ಘಾಟಿಸಿದರು. ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ, ಬಿಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ, ಜಿಲ್ಲಾ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಇತರರಿದ್ದರು.
Published on

ಗಂಗಾವತಿ: ಉಳಿತಾಯ ಮತ್ತು ಸಾಲ ಸೌಲಭ್ಯ ಯೋಜನೆಗಳ ಮೂಲಕ ಬಡಜನರ ಆರ್ಥಿಕ ಗುಣಮಟ್ಟ ಸುಧಾರಿಸಲಾಗುತ್ತಿದ್ದು, ಯೋಜನೆಗಳು ಪರಿಣಾಮಕಾರಿ ಅನುಷ್ಠಾನಗೊಂಡಿವೆ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಈಶ್ವರ ಸವಡಿ ಹೇಳಿದರು.

ನಗರದ ಶ್ರೀ ಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಮತ್ತು ಪ್ರತಿಭಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಸಹಾಯ ಗುಂಪುಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದ್ದು, ಬ್ಯಾಂಕಿಂಗ್, ಧಾರ್ಮಿಕ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಟ್ರಸ್ಟ್ ಚಟುವಟಿಕೆಗಳು ಸಮಾಜಮುಖಿಯಾಗಿವೆ. ಸಾಮಾನ್ಯ ಮಹಿಳೆಯರು ಗುಂಪು ರಚನೆ ಮೂಲಕ ಸ್ವಾವಲಂಬಿಯಾಗುತ್ತಿದ್ದು, ಆರೋಗ್ಯ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಪುರುಷ ಪ್ರದಾನ ಸಮಾಜದಲ್ಲಿ ಮಹಿಳೆಯೂ ಅಭಿವೃದ್ಧಿಯ ಮುಖ್ಯವಾಹಿನಿಗೆ ಬರುತ್ತಿದ್ದು, ಎಲ್ಲ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಟ್ರಸ್ಟ್ ಚಟುವಟಿಕೆಗಳಿಂದ ಹಲವು ಜೀವಗಳು ಉಳಿದಿದ್ದು, ನಿಯಂತ್ರಣ ಸಲಕರಣೆಗಳನ್ನು ಉಚಿತ ವಿತರಿಸಿದೆ ಎಂದರು.

ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ ಮಾತನಾಡಿ, ಜಿಲ್ಲೆಯಲ್ಲಿ 304 ಸ್ವಹಾಯ ಸಂಘಗಳಿದ್ದು, 26ಸಾವಿರ ಸದಸ್ಯರಿದ್ದಾರೆ. 25 ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಜಾಗೃತಿ ಮೂಡಿಸಲಾಗುತ್ತಿದೆ. ಗುಂಪಿನ ಸದಸ್ಯರಿಂದ 17 ಕೋಟಿ ರೂ.ಉಳಿತಾಯವಾಗಿದ್ದರೆ, 95 ಕೋಟಿ ರೂ. ಸಾಲ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ ಎಂದರು.

ಟ್ರಸ್ಟ್ ಚಟುವಟಿಕೆಗಳ ಕುರಿತು ಜಿಲ್ಲಾ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಪ್ರಾಸ್ತಾವಿಕ ಮಾತನಾಡಿದರು. ದುಶ್ಚಟ ಮುಕ್ತ ಸಮಾಜ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಉಪವಿಭಾಗ ಆಸ್ಪತ್ರೆ ಎಆರ್‌ಟಿ ಕೇಂದ್ರದ ಆಪ್ತ ಸಮಾಲೋಚಕಿ ಪಲ್ಲವಿ ದೇಸಾಯಿ ಉಪನ್ಯಾಸ ನೀಡಿದರು. ಗುಂಪಿನ ಸದಸ್ಯರಿಂದ ರಂಗೋಲಿ, ಪುಷ್ಪ ಗುಚ್ಛ ತಯಾರಿಕೆ, ಗಾಯನ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಗುಂಪುಗಳಿಗೆ ಮತ್ತು ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಾಜ ವಂಶಸ್ಥೆ ಲಲಿತಾರಾಣಿರಾಯಲು, ಬಾಲಕರ ಸ.ಪ.ಪೂ. ಕಾಲೇಜಿನ ಉಪನ್ಯಾಸಕಿ ಲಲಿತಾ ನಾರಾಯಣಕಂದಗಲ್, ವಿದ್ಯಾನಿಕೇತನ ಪದವಿ ಕಾಲೇಜಿನ ಉಪನ್ಯಾಸಕಿ ಎ.ರಾಜೇಶ್ವರಿ, ಕೆಎಂಎ್ ಮಾಜಿ ನಿರ್ದೇಶಕ ಸತ್ಯನಾರಾಯಣ, ಎಎಸೈ ಕಲಾವತಿ, ಜನಜಾಗೃತಿ ಸಮಿತಿ ಸದಸ್ಯರಾದ ನೀಲಕಂಠಪ್ಪ ನಾಗಶೆಟ್ಟಿ, ಚನ್ನವೀರನಗೌಡ ಆರಾಳ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾರದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net