ಕುಂಠಿತ ಮಕ್ಕಳ ಬೆಳವಣಿಗೆ ಪೌಷ್ಠಿಕ ಆಹಾರ ಸಹಕಾರಿ

Vadaki Poshan Masacharani
ಕನಕಗಿರಿ ತಾಲೂಕಿನ ವಡಕಿ ಗ್ರಾಮದಲ್ಲಿ ನಡೆದ ಪೋಷಣ ಮಾಸಾಚರಣೆಯನ್ನು ಸಿಡಿಪಿಒ ವಿರುಪಾಕ್ಷಯ್ಯಸ್ವಾಮಿ ಉದ್ಘಾಟಿಸಿದರು.
Published on

ಕನಕಗಿರಿ: ಅಪೌಷ್ಠಿಕತೆ, ರಕ್ತ ಹೀನತೆ ಹಾಗೂ ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳು, ಕಿಶೋರಿಯರು, ಮಹಿಳೆಯರು ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಚಿಕಿತ್ಸೆಯೊಂದಿಗೆ ಬೆಳವಣಿಗೆ ಹೊಂದಲು ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದು ಶಿಶು ಅಭಿವೃದ್ದಿ ಅಧಿಕಾರಿ ವಿರುಪಾಕ್ಷಯ್ಯ ಸ್ವಾಮಿ ಹೇಳಿದರು.

ಬುಧವಾರದಂದು ತಾಲೂಕಿನ ವಡಕಿ ಗ್ರಾಮದಲ್ಲಿ ಜಿಪಂ ಕೊಪ್ಪಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಪೋಷಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ ಮಾಸಾಚರಣೆ ನಡೆಸಲಾಗುತ್ತಿದೆ. ಅದರಂತೆ ಅಂಗನವಾಡಿ ಕೇಂದ್ರಗಳಲ್ಲಿ ದಿನಕೊಂದು ಚಟುವಟಿಕೆಯಂತೆ ಅಪೌಷ್ಟಿಕ, ಕುಂಠಿತ ಬೆಳವಣಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ರಕ್ತಹೀನತೆಯಿಂದ ಬಳಲುವ ಮಕ್ಕಳು ಮಹಿಳೆಯರು ಕಿಶೋರಿಯರಿಗೆ ಪೌಷ್ಟಿಕ ಆಹಾರ ಸೇವನೆಯ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ಪ್ರತಿ ಮೊದಲ ಹಾಗೂ ಮೂರನೇ ಶುಕ್ರವಾರದಂದು ಅಭಿಯಾನದಡಿ ಮೊದಲನೇ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, 6 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ಅನ್ನ ಪ್ರಾಸನ್ನ ಮಾಡಿಸಲಾಗುವುದು ಎಂದರು.

ಮುಖ್ಯಗುರು ಸತೀಶ್ ಸಿಎನ್ ಮಾತನಾಡಿ, ಶಿಶು ಅಭಿವೃದ್ಧಿ ಇಲಾಖೆಯು ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರ ಪದಾರ್ಥಗಳು, ಮೊಟ್ಟೆ ಜತೆಗೆ ಹಾಲು, ತರಕಾರಿಯನ್ನು ಸೇವಿಸಿದರೆ ಅದರಲ್ಲಿರುವ ಪೌಷ್ಠಿಕ ಅಂಶಗಳು ಅಪೌಷ್ಠಿಕತೆಯನ್ನು ದೂರಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ರೇಣುಕಾ, ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಂದ್ಲಾರ್, ಗ್ರಾಪಂ ಸದಸ್ಯರಾದ ತಿರುಕನಗೌಡ, ಲಕ್ಷ್ಮಣ, ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ ದ್ಯಾಮಣ್ಣ, ಉಪಾಧ್ಯಕ್ಷ ಲಕ್ಷ್ಮಣ, ಮೇಲ್ವಿಚಾರಕಿ ರತ್ನಮ್ಮ ತೋಳದ,

ಪೋಷಣ ಅಭಿಯಾನ ತಾಲೂಕ ಸಂಯೋಜಕ ಯಮನೂರಪ್ಪ ನಾಯಕ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net