

ಹುಬ್ಬಳ್ಳಿ : ಓದು, ಬರಹದ ಜತೆಗೆ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಹೊರಹಾಕುವುದೇ ಶಿಕ್ಷಣ. ಓದುವುದು ಜ್ಞಾನಾರ್ಜನೆಗೆ ಹೊರತು ಅಂಕ ಗಳಿಕೆಗೆ ಅಲ್ಲ ಎಂದು ಡಿಸಿಪಿ ರವೀಶ ಸಿ.ಆರ್. ಹೇಳಿದರು.
ನಗರದ ಎಸ್ಜೆಎಂವಿಎಸ್ಎ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 2025-26ನೇ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಉದ್ಘಾಟನೆ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುರುಗಳನ್ನು ಮೀರಿಸುವ ಸಾಧನೆ ಮಾಡಬೇಕು. ಅದೇ ಗುರುಗಳಿಗೆ ನಿಜವಾಗಿ ನೀಡುವ ಗೌರವ. ಧೈರ್ಯ ಮತ್ತು ಧನಾತ್ಮಕ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಜೆಎಂವಿ ಸಂಘದ ಗೌರವ ಅಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ನಿರಂತರ ಅಧ್ಯಯನ, ಸಮಯ ಪಾಲನೆಯನ್ನು ವಿದ್ಯಾರ್ಥಿನಿಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಹಳೇಯ ವಿದ್ಯಾರ್ಥಿನಿ, ಗ್ರೀನ್ ಪಿಂಚ್ ಲೀಗಲ್ ಸರ್ವಿಸ್ ಉಪಾಧ್ಯಕ್ಷೆ ಸುಧಾ ಮೂಲಿಮನಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಾಚಾರ್ಯು ಅನುರಾಧಾ ಹೊಸಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಮೀತಾ ಶೆಟ್ಟರ ನಿರೂಪಿಸಿದರು. ಡಾ. ಸುಭಾಷ ಜಾಧವ ವಂದಿಸಿದರು.