

ಹೆಬ್ರಿ: ಸ್ಕೊಡ್ವೆಸ್ ಸಂಸ್ಥೆ ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಕರಾವಳಿ ರೈತ ಉತ್ಪಾದಕರ ಸಹಕಾರಿ ಸಂಘ ನಿಯಮಿತ ಹೆಬ್ರಿ ಪ್ರಗತಿಪರ ರೈತರು, ಸಂಸ್ಥೆಯ ಅಧ್ಯಕ್ಷರು, ನಿರ್ದೇಶಕರು ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಎರಡು ದಿನಗಳ ಅಧ್ಯಯನ ಪ್ರವಾಸ ನಡೆಯಿತು.
ಪ್ರವಾಸದಲ್ಲಿ ತೋಟಗಾರಿಕಾ ಬೆಳೆಗಳು, ಅಡಕೆ ಸುಲಿಯುವ ಯಂತ್ರಗಳು ಮತ್ತು ಸಂಸ್ಕರಣಾ ಘಟಕಗಳ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆದರು. ರೈತರು ತೆಂಗು, ಕಾಳುಮೆಣಸು, ಬಾಳೆ, ಏಲಕ್ಕಿ, ಅಡಿಕೆ ಮತ್ತು ಇತರ ಸಾಂಬಾರು ಬೆಳೆಗಳ ಅಧ್ಯಯನ ನಡೆಸಿದರು.
ನಿರ್ದೇಶಕರಾದ ನಾಗಭೂಷಣ್ ರಾವ್, ಸುರೇಂದ್ರ ಶೆಟ್ಟಿ, ಗೀತಾ ಶೆಟ್ಟಿ, ಪ್ರಮುಖ ರೈತ ಸದಸ್ಯರಾದ ಶ್ರೀಕಾಂತ್ ಆಚಾರ್ಯ, ಸಂಪತ್ ಕುಮಾರ್ ಶೆಟ್ಟಿ, ಜ್ಯೋತಿ ಹರೀಶ್, ಶೋಭಾ ಶೆಟ್ಟಿ, ಸುಗಂಧಿ ನಾಯ್ಕ, ಸುರೇಶ್ ಶೆಟ್ಟಿ, ಚೆಲುವಯ್ಯ ಪೂಜಾರಿ, ಜಯಲಕ್ಷ್ಮೀನಾಯ್ಕ, ಸಂಪನ್ಮೂಲ ವ್ಯಕ್ತಿ ಹರೀಶ್ ಉಪಸ್ಥಿತರಿದ್ದರು.