ದಾಸಿಮಯ್ಯ ವಚನಗಳನ್ನು ಅಧ್ಯಯನ ಮಾಡಿ

ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಉಪ ತಹಸೀಲ್ದಾರ್ ಎಂ.ಚಂದ್ರಮೋಹನ್, ಕಂದಾಯ ನಿರೀಕ್ಷಕ ಸಿದ್ದಪ್ಪ, ಗ್ರಾಮಲೆಕ್ಕಿಗರಾದ ನಡುವಲಮನೆ ತಿಪ್ಪೇಸ್ವಾಮಿ, ಅನೀತಾ ಪೂಜಾರ್, ಅಬುಜಾಕ್ಷಿ ಇತರರಿದ್ದರು.
ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ದೇವರ ದಾಸಿಮಯ್ಯ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಉಪ ತಹಸೀಲ್ದಾರ್ ಎಂ.ಚಂದ್ರಮೋಹನ್, ಕಂದಾಯ ನಿರೀಕ್ಷಕ ಸಿದ್ದಪ್ಪ, ಗ್ರಾಮಲೆಕ್ಕಿಗರಾದ ನಡುವಲಮನೆ ತಿಪ್ಪೇಸ್ವಾಮಿ, ಅನೀತಾ ಪೂಜಾರ್, ಅಬುಜಾಕ್ಷಿ ಇತರರಿದ್ದರು.
Published on

ಕಾನಹೊಸಹಳ್ಳಿ: ಬಸವಾದಿ ಶರಣರ ಕಾಲದಲ್ಲಿ ಸಮಸಮಾಜಕ್ಕಾಗಿ ಹಂಬಲಿಸಿದವರಲ್ಲಿ ದೇವರ ದಾಸಿಮಯ್ಯ ಅಗ್ರಪಂಕ್ತಿಯ ವಚನಕಾರ ಎಂದು ಉಪ ತಹಸೀಲ್ದಾರ್ ಎಂ.ಚಂದ್ರಮೋಹನ್ ಹೇಳಿದರು.

ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಕಾರರು ಕಾಯಕ ಮತ್ತು ಸಮಾಜದ ನೈಜತೆಯನ್ನು ನೋಡಿ ವಚನಗಳನ್ನು ರಚಿಸಿದ್ದಾರೆ. ಅಲ್ಲದೆ, ಲಿಂಗಬೇದ, ಜಾತಿ ವ್ಯವಸ್ಥೆಯನ್ನು ವಿರೋಧಿಸುವ ವಚನ ರಚಿಸಿದ ಕೀರ್ತಿ ದೇವರ ದಾಸಿಮಯ್ಯ ಅವರಿಗೆ ಸಲ್ಲುತ್ತದೆ. ದಾಸಿಮಯ್ಯ ವಚನಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದರು.

ಕಂದಾಯ ನಿರೀಕ್ಷಕ ಸಿದ್ದಪ್ಪ, ಗ್ರಾಮಲೆಕ್ಕಿಗರಾದ ಅಬುಜಾಕ್ಷಿ, ಚನ್ನಬಸಯ್ಯ, ಅನೀತಾ ಪೂಜಾರ್, ಅಗ್ರಹಾರ ಮಂಜುನಾಥ, ಸಿದ್ದೇಶ, ನಡುವಲಮನೆ ತಿಪ್ಪೇಸ್ವಾಮಿ, ಕುಂಬಾರ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net