ಪುರಾತತ್ವ ಇಲಾಖೆಯಿಂದ ಶಾಸನಗಳ ಅಧ್ಯಯನ

Study of Inscriptions by Archaeological Department
Study of Inscriptions by Archaeological Department in kundana
Published on

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಕುಂದಾಣ ಬೆಟ್ಟಕ್ಕೆ ಭೇಟಿ ನೀಡಿದ ಕೇಂದ್ರ ಪುರಾತತ್ವ ಇಲಾಖೆ ಶಾಸನ ತಜ್ಞ ಡಾ.ಅನಿಲ್‌ಕುಮಾರ್ ಹಾಗೂ ತಂಡ ಇತಿಹಾಸ ಸಂಶೋಧಕ ಗುರುಸಿದ್ದಯ್ಯ ಪತ್ತೆಹಚ್ಚಿದ ಬಂಡೆ ಶಾಸನಗಳ ಅಧ್ಯಯನ ನಡೆಸಿತು.
ಪತ್ತೆಯಾದ ಎರಡೂ ಶಾಸನಗಳು ಕನ್ನಡ ಲಿಪಿಯಲ್ಲಿದ್ದು, ತೆಲುಗು ಭಾಷೆ ಪ್ರಭಾವ ಹೆಚ್ಚಾಗಿ ಕಂಡುಬಂದಿದೆ, ಲಿಪಿಯ ಆಧಾರದಂತೆ ಈ ಶಾಸನಗಳೂ 17ನೇ ಶತಮಾನಕ್ಕೆ ಸೇರಿವೆೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಶಾಸನದಲ್ಲಿ ಕೆಲವು ವ್ಯಕ್ತಿಗಳ ಹೆಸರನ್ನು ಕೆತ್ತಲಾಗಿದೆ. ಬುಡ ಎನ್ನುವ ಅಂತ್ಯ ವಿಷಯೋಕ್ತಿಯನ್ನು ಹೊಂದಿದೆ. ಪ್ರಸ್ತುತ ಇದರ ಸಂಪೂರ್ಣ ಅರ್ಥ ವಿವರಣೆ ಕಷ್ಟಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಶಾಸನದಲ್ಲಿ ಗುರುವಯ್ಯ, ನಾರಸಪ್ಪ, ಕಿಚಕ ಮುಂದಾದ ವ್ಯಕ್ತಿಗಳನ್ನು ಹಾಗೂ ಅದರೊಂದಿಗೆ ಅವರ ಸ್ಥಳಗಳ ವಿವರಗಳನ್ನು ಗಮನಿಸಬಹದು. ನಾರಸಪ್ಪನು ಸೊಣೆಹಳ್ಳಿಯವನು ಎಂದು ತಿಳಿದುಬರುತ್ತಿದೆ ಎಂದು ಡಾ.ಅನಿಲ್‌ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net