ಎಕ್ಸೆಲ್ ಕಾಲೇಜಲ್ಲಿ ಅಧ್ಯಯನ ಸಾಮಗ್ರಿ ಲೋಕಾರ್ಪಣೆ

New Project (3)
Published on

ಬೆಳ್ತಂಗಡಿ: ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರ ಸ್ಟಡಿ ಮೆಟೀರಿಯಲ್‌ಗಳನ್ನು ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿಡುಗಡೆಗೊಳಿಸಿದರು.

ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ. ಅವರ ಸಂಪಾದನೆಯ, ಆರ್ಥಿಕ ವಿಜ್ಞಾನ ಉಪನ್ಯಾಸಕ ಅರುಣ್ ಕ್ಯಾಸ್ಟೋಲಿನೋ ಅವರ ವ್ಯವಹಾರ ಅಧ್ಯಯನ, ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರಸನ್ನ ಭೋಜರಾಜ್ ಅವರ ಲೆಕ್ಕ ವಿಜ್ಞಾನ ಪುಸ್ತಕಗಳ ಬಿಡುಗಡೆ ಮಾಡಲಾಯಿತು. ಎಕ್ಸೆಲ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಶುಭ ಹಾರೈಸಿದರು.

ವಿದ್ಯಾರ್ಥಿಗಳಾದ ಅಭಿಷ್ಟಾ ಸ್ವಾಗತಿಸಿದರು. ಯಾನಾ ಪೊನ್ನಮ್ಮ ಮತ್ತು ಯುಕ್ತಿ ಗೌಡ ಕಾರ್ಯಕ್ರಮ ನಿರೂಪಿಸಿದರು. ದಿಯಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net