

ವಿಜಯಪುರ:ವಿದ್ಯಾರ್ಥಿಗಳು ಕಾನೂನು ಶಿಣವನ್ನು ಶ್ರದ್ಧೆಯಿಂದ ಅಧ್ಯಯನ ನಡೆಸಿ ಸಮರ್ಪಣೆ ಭಾವನೆಯಿಂದ ಸೇವೆ ಸಲ್ಲಿಸುವ ಮೂಲಕ ನ್ಯಾಯ ಮತ್ತು ಸಮಗ್ರತೆ ಎತ್ತಿ ಹಿಡಿಯಬೇಕೆಂದು ಬೆಂಗಳೂರಿನ ಕರ್ನಾಟಕ ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ಪ್ರೊ. ಸಿ.ಎಸ್. ಪಾಟೀಲ ಹೇಳಿದರು.
ನಗರದ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಭವಿಷ್ಯದ ನ್ಯಾಯದ ರಕರು. ಸಂಸ್ಥೆ ಒದಗಿಸುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದರು.ಸಂಸ್ಥೆ ಕಾನೂನು ಸಲಹೆಗಾರ ಸುರೇಶ ಹಕ್ಕಿ ಮಾತನಾಡಿದರು.
ಸಂಸ್ಥೆಯ ಜಮಖಂಡಿ ಆವರಣದ ಆಡಳಿತಾಧಿಕಾರಿ ಎಸ್.ಎಚ್. ಲಗಳಿ ಮಾತನಾಡಿದರು. ಡೀಮ್ಡ್ ವಿವಿ ಹಂಗಾಮಿ ಕುಲಪತಿ ಡಾ. ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ ಇದ್ದರು.
ಕಾನೂನು ಶಾಲೆಯ ನಿಕಾಯ ಮುಖ್ಯಸ್ಥ ರುವೀರ ಕುಲಕರ್ಣಿ ಸ್ವಾಗತಿಸಿದರು. ಉಪನ್ಯಾಸಕಿ ಲಾವಣ್ಯ ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಪ್ರಗತಿ ಮತ್ತು ಶ್ರೇಯ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಶೇಷಾದ್ರಿ ಕೆ. ವಂದಿಸಿದರು.
ವಿಜಯಪುರದ ಬಿಎಲ್ಡಿಇ ಡೀಮ್ಡ್ ವಿವಿಯ ಕಾನೂನು ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಓರಿಯೆಂಟೇಶನ್ ಕಾರ್ಯಕ್ರಮವನ್ನು ಸಿ.ಎಸ್. ಪಾಟೀಲ ಉದ್ಘಾಟಿಸಿದರು. ಡಾ. ವೈ.ಎಂ. ಜಯರಾಜ, ಸುರೇಶ ಹಕ್ಕಿ, ಎಸ್.ಎಚ್. ಲಗಳಿ ಮತ್ತಿತರರಿದ್ದಾರೆ.