

ಕಿಕ್ಕೇರಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಬುಧವಾರ ಸಂಸತ್ ಕಲ್ಪಿತ ಸಭೆ ಆಯೋಜಿಸಲಾಗಿತ್ತು.
ಲೋಕಸಭೆ ಸದನದಲ್ಲಿ ನಡೆಯುವಂತೆ ಚರ್ಚೆಗಳು, ನಡಾವಳಿ, ಕಾನೂನು ರಚನೆ ವಿಧಾನ, ಅಲ್ಲಿನ ಪ್ರಶ್ನಾವಳಿ, ನಿಲುವಳಿ ಸೂಚನೆ ಎಲ್ಲವನ್ನೂ ಸವಿಸ್ತಾರವಾಗಿ ಅಭಿನಯದ ಮೂಲಕ ಚರ್ಚೆ, ವಿಷಯ ಮಂಥನ ಮಾಡಿದರು.
ಸಭಾಧ್ಯಕ್ಷರು, ಪ್ರಧಾನಮಂತ್ರಿ, ಪ್ರತಿಪಕ್ಷದ ನಾಯಕರು, ಸಚಿವರು, ಅಧಿಕಾರಿಗಳ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಲ್ಪಿತ ಸದನದಲ್ಲಿ ಸಭಾಧ್ಯಕ್ಷರು ತಾಳ್ಮೆಯಿಂದ ಆಡಳಿತ, ಪ್ರತಿಪಕ್ಷದ ನಾಯಕರು ಮಂಡಿಸಿದ ವಿಷಯ ಅವಲೋಕಿಸಿದರು. ಚರ್ಚೆ, ವಾಕ್ಸಮರ, ಹಕ್ಕು ಒತ್ತಾಯಗಳನ್ನು ತಾಳ್ಮೆಯಿಂದ ಆಲಿಸಿದರು.
ಸಭೆ ಮೂಲ ಉದ್ದೇಶಗಳ ಕುರಿತು ಸಮಗ್ರವಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಜಿ.ಎಸ್.ಕುಮಾರಸ್ವಾಮಿ ಮಕ್ಕಳಿಗೆ ಪರಿಚಯ ಮಾಡಿಕೊಟ್ಟರು. ಭವಿಷ್ಯದ ವಿದ್ಯಾರ್ಥಿಗಳು ಸಕಾಲಿಕ ವಿದ್ಯಮಾನ, ರಾಜಕೀಯ ಬೆಳವಣಿಗೆಗಳನ್ನು ಸಮಗ್ರವಾಗಿ ಅರಿತರೆ ಮುಂದೆ ಉತ್ತಮ ರಾಜಕಾರಣಿಯಾಗಿ ಸುಭದ್ರ ನಾಡು ಕಟ್ಟಲು ಸಹಕಾರಿಯಾಗಲಿದೆ. ರಾಜಕೀಯ ವ್ಯಕ್ತಿಗಳ ಜವಾಬ್ದಾರಿ, ಕರ್ತವ್ಯ ತಿಳಿದರೆ ನೇರವಾಗಿ ಪ್ರಶ್ನಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದಾಗಿ ತಿಳಿ ಹೇಳಿದರು.
ಪ್ರಾಂಶುಪಾಲ ಎಂ.ಆರ್. ಸಹದೇವ, ಉಪನ್ಯಾಸಕರಾದ ಎ.ಎಂ.ಮಂಜುನಾಥ್, ಎಸ್.ಡಿ. ಹರೀಶ್, ಅರ್ಪಿತಾ, ಚಂದ್ರಿಕಾ, ಲಾವಣ್ಯ ಇದ್ದರು.