ಶ್ರದ್ಧೆಯಿಂದ ಓದಿ ಪರೀಕ್ಷೆ ಎದುರಿಸಿ

Study hard and face the exam.
ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಮಖಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಕ್ಷಕರಾದ ಶಾರದಾ ಮಠ, ಸಂಜೀವ ಝಂಬುರೆ, ಸಂಗನಬಸವ ಉಟಗಿ ಇತರರಿದ್ದರು.
Published on

ಚಿಕ್ಕಪಡಸಲಗಿ: ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವ ಪೂರ್ಣವಾದದ್ದು. ಶಾಲೆಯಲ್ಲಿ ಶ್ರದ್ಧೆಯಿಂದ ಓದಿ ತಂದೆ-ತಾಯಿ ಹಾಗೂ ಶಾಲೆ ಋಣ ತೀರಿಸಬೇಕೆಂದು ಜಮಖಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮೀಪದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಗೆ ಸಂಜೆ ಅನಿರೀಕ್ಷಿತ ಭೇಟಿ ನೀಡಿದಾಗ ವಿದ್ಯಾರ್ಥಿಗಳೆಲ್ಲರೂ ಗುಂಪು ಅಧ್ಯಯನದಲ್ಲಿ ತೊಡಗಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಪರೀಕ್ಷೆಗಳು ಸಮೀಪಿಸುತ್ತಿದ್ದು, ತಾವೆಲ್ಲರೂ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಕಠಿಣವೆನಿಸುವ ವಿಷಯಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಓದಿದ್ದನ್ನು ಮತ್ತೆ ಮತ್ತೆ ಬರೆಯಬೇಕು. ಸ್ನೇಹಿತರೊಂದಿಗೆ ವಿಷಯವನ್ನು ಚರ್ಚಿಸುತ್ತಿದ್ದರೆ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಬರೆಯಲು ಸಹಾಯವಾಗುತ್ತದೆ ಎಂದರು.

ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಿಗೆ ಅಧಿಕ ಸಮಯ ಮೀಸಲಿಟ್ಟು ಹೆಚ್ಚಿನ ಅಂಕ ಗಳಿಸಲು ಪ್ರಯತ್ನಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.

ಮೊದಲ ಸರಣಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಲು ಪ್ರೇರೇಪಿಸಿದರು. ಶಿಕ್ಷಕರಾದ ಶಾರದಾ ಮಠ, ಸಂಜೀವ ಝಂಬುರೆ, ಸಂಗನಬಸವ ಉಟಗಿ, ಬಾಹುಬಲಿ ಮುತ್ತೂರ, ಸವಿತಾ ಬೆನಕಟ್ಟಿ, ಆಶಿಫಾ ಬಾನು ಮೋಮಿನ್, ಶಕುಂತಲಾ ಬಿರಾದಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net