ಶ್ರದ್ಧೆಯಿಂದ ಅಭ್ಯಸಿಸಿ ಸಾಧನೆ ಮಾಡಿ

IMG20250705194055.jpg
Published on

ಬೆಳಗಾವಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ. ತಂದೆ, ತಾಯಿ ಮತ್ತು ಶಿಕ್ಷಕರು ನೀಡುವ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ ಸಾಧನೆ ಮಾಡಬೇಕು ಎಂದು ಲೆಪ್ಟಿನೆಂಟ್ ಕರ್ನಲ್ ಗೌರವ್ ಸೇಗೆನ್ ಅಭಿಪ್ರಾಯಪಟ್ಟರು.

ನಗರದ ಭರತೇಶ್ ಪಿಯು ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಜಿಮಖಾನ್ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಗಳ ಸನ್ಮಾರ್ಗದಲ್ಲಿ ಶಿಸ್ತು, ಸಂಯಮ ರೂಢಿಸಿಕೊಂಡು ಉತ್ತಮ ಪ್ರಜೆಯಾಗಬೇಕು ಎಂದರು.

ಭರತೇಶ್ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ವಿನೋದ ದೊಡ್ಡನವರ ಮಾತನಾಡಿ, ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳಿದ್ದು, ಗುರಿ ತಲುಪಲು ಶ್ರದ್ಧೆಯಿಂದ ಅಧ್ಯಯನ ಮಾಡಿ, ದೇಶದ ಪ್ರಗತಿಗೆ ಪಾಲುದಾರಾಗಿರಿ ಎಂದು ಹಾರೈಸಿದರು.

ಉಪಾಧ್ಯಕ್ಷ ಶ್ರೀಪಾಲ ಖೇಮಲಾಪುರೆ, ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಹಿರಚಂದ ಕಮನಿ, ಪ್ರಾಚಾರ್ಯೆ ದೀಪ್ತಿ ಕುಲಕರ್ಣಿ, ಎ.ಆರ್.ರೊಟ್ಟಿ, ಸಂಜಯ ಶಿರಗುಪ್ಪೆ ,ಅಶೋಕ ಕಾಡಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net