ಬರವಣಿಗೆಗೆ ಅಧ್ಯಯನ, ಅಭ್ಯಾಸ ಮುಖ್ಯ

13sgr2
ಸಾಗರದಲ್ಲಿ ಎಸ್.ಸಿ.ಸೌಂದರ್ಯಾ ಅವರ ‘ಸ್ವ-ಭಾವ’ ಕೃತಿಯನ್ನು ಸಾಹಿತಿ ವಿ.ಗಣೇಶ್ ಬಿಡುಗಡೆ ಮಾಡಿದರು. ಶ್ರೀಧರ ಸಿ.ಹೆಗಡೆ, ನಾರಾಯಣಮೂರ್ತಿ ಕಾನುಗೋಡು, ಚಂದ್ರಶೇಖರ ಜೋಯಿಸ್, ಮಾ.ಸ. ನಂಜುಂಡಸ್ವಾಮಿ ಇತರರಿದ್ದರು.
Published on

ಸಾಗರ: ಕವನ, ಕಥೆ, ಲೇಖನ ಬರೆಯುವಾಗ ಅನುಭವ ಅಗತ್ಯ. ಅನುಭವದ ಆಧಾರದ ಮೇಲೆ ಮೂಡಿಬರುವ ಸಾಹಿತ್ಯದಲ್ಲಿ ಜೀವಂತಿಕೆ ಇರುತ್ತದೆ. ಆರಂಭದಲ್ಲಿ ಪ್ರತಿಯೊಬ್ಬರೂ ತಮ್ಮ ಅನುಭವವನ್ನು ಕಾವ್ಯದ ಮೂಲಕ ಅಭಿವ್ಯಕ್ತಿ ಪಡಿಸುತ್ತಾರೆ ಎಂದು ಸಾಹಿತಿ ವಿ.ಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ದತ್ತ ಮಂದಿರದಲ್ಲಿ ಶನಿವಾರ ಕಾರ್ಯನಿರತ ಮತ್ತು ನಿವೃತ್ತ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜೋಶಿ ಫೌಂಡೇಶನ್ ಆಶ್ರಯದಲ್ಲಿ ಎಸ್.ಸಿ.ಸೌಂದರ್ಯಾ ಅವರ ‘ಸ್ವ-ಭಾವ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿ, ಯುವ ಸಮೂಹ ಸಾಹಿತ್ಯ ಕ್ಷೇತ್ರದತ್ತ ಮುಖ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ. ನಾವು ಬರೆಯುವ ಸಾಹಿತ್ಯ ಓದುಗರನ್ನು ಆಕರ್ಷಣೆ ಮಾಡುವ ಜತೆಗೆ ಓದಿಸಿಕೊಂಡು ಹೋಗಬೇಕು. ಸೌಂದರ್ಯಾ ತಮ್ಮ ಪ್ರಥಮ ಕೃತಿಯಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು, ಪರಿಸರ, ಪ್ರೀತಿ, ಪ್ರೇಮ, ತಂದೆ, ತಾಯಿ ಕುರಿತು ಅಭಿವ್ಯಕ್ತಗೊಳಿಸಿದ್ದಾರೆ ಎಂದರು.
ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಮಾತನಾಡಿ, ಸೌಂದರ್ಯಾ ಅವರು ದ್ವಿತೀಯ ವರ್ಷದ ಎಂಬಿಎ ಅಭ್ಯಾಸ ಮಾಡುತ್ತಿದ್ದು ಓದಿನ ಜತೆಗೆ ಸಾಹಿತ್ಯಾಭ್ಯಾಸವನ್ನು ಮಾಡುತ್ತಿರುವುದು ಅಭಿನಂದಾರ್ಹ ಸಂಗತಿ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿನಿ ಚಂದನಾ ಮಾಸೂರು ಅವರನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಶ್ರೀಧರ ಸಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನಾರಾಯಣಮೂರ್ತಿ ಕಾನುಗೋಡು ಅಭಿನಂದನಾ ಭಾಷಣ ಮಾಡಿದರು. ಚಂದ್ರಶೇಖರ ಜೋಯಿಸ್, ಮಾ.ಸ. ನಂಜುಂಡಸ್ವಾಮಿ, ಮಧುಕರ ಎನ್.ಹೆಗಡೆ, ಗೋಪಿ ದೀಕ್ಷಿತ್, ಭುವನೇಶ್ವರಿ ಹೆಗಡೆ, ಎಲ್.ಎಂ.ಹೆಗಡೆ, ಲಕ್ಷ್ಮೀ ಭಾಗವತ್, ಸತ್ಯವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net