ವಾದಕ ವಸ್ತುಗಳಿಗೆ ವಿದ್ಯಾರ್ಥಿಗಳು, ಯುವಕರು ಬಲಿ

must
ಗುಂಡ್ಲುಪೇಟೆ ಪಟ್ಟಣದ ಅಶ್ವಿನಿ ಬಡಾವಣೆಯಲ್ಲಿರುವ ಶ್ರೀ ವಿನಾಯಕ ಕಾನ್ವೆಂಟ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮದಲ್ಲಿ ಇನ್‌ಸ್ಪೆಕ್ಟರ್ ಜಯಕುವಾರ್ ಅವರನ್ನು ಸನ್ಮಾನಿಸಲಾಯಿತು. ನಂಜಪ್ಪ, ಲಕ್ಷ್ಮೀ ಚಂದ್ರಶೇಖರ್, ನಟರಾಜ್ ಇತರರಿದ್ದರು.
Published on

ಗುಂಡ್ಲುಪೇಟೆ : ವಿದ್ಯಾರ್ಥಿಗಳು, ಯುವಕರು ಧೂಮಪಾನ, ಡ್ರಗ್ಸ್ ಸೇರಿದಂತೆ ವಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ತಮ್ಮ ಅಮೂಲ್ಯ ಜೀವನವನ್ನು ಹಾಳು ವಾಡಿಕೊಳ್ಳುತ್ತಿದ್ದಾರೆ. ಪಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಟ್ಟಣ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುವಾರ್ ಹೇಳಿದರು.

ಗುಂಡ್ಲುಪೇಟೆ ಪಟ್ಟಣದ ಅಶ್ವಿನಿ ಬಡಾವಣೆಯಲ್ಲಿರುವ ಶ್ರೀ ವಿನಾಯಕ ಕಾನ್ವೆಂಟ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ವಾತನಾಡಿದರು. ವಾದಕ ವಸ್ತುಗಳ ಬಳಕೆಯಿಂದ ವಾನಸಿಕ, ದೈಹಿಕವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಇದರೊಂದಿಗೆ ಆನ್‌ಲೈನ್ ಗೇಮ್‌ಗಳು ಮಕ್ಕಳನ್ನು ಖಿನ್ನತೆಗೆ ದೂಡುತ್ತಿವೆ. ಇದು ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಮೊಬೈಲ್ ಅನ್ನು ಮಕ್ಕಳಿಗೆ ನೀಡಬೇಕೆ, ಬೇಡವೇ ಎಂಬುದರ ಬಗ್ಗೆ ಪಾಲಕರು ವಿಮರ್ಶಿಸಬೇಕು. ಇಲ್ಲಿನ ಕಾನ್ವೆಂಟ್‌ನಲ್ಲಿ ಶಿಕ್ಷಕರು, ಸಿಬ್ಬಂದಿ ಜತೆಗೆ ವಿದ್ಯಾರ್ಥಿಗಳೂ ಶಾಲಾ ಸಮಯದಲ್ಲಿ ಮೊಬೈಲ್ ಬಳಸದಂತೆ ಕಟ್ಟುನಿಟ್ಟಾಗಿ ನಿಯಮ ಜಾರಿ ವಾಡಿರುವುದು ಶ್ಲಾನೀಯ ಎಂದು ಪ್ರಶಂಸಿಸಿದರು.

ಶ್ರೀ ವಿನಾಯಕ ಕಾನ್ವೆಂಟ್‌ನ ಅಧ್ಯಕ್ಷ ನಂಜಪ್ಪ, ಆಡಳಿತ ಮಂಡಳಿ ಸದಸ್ಯೆ ಲಕ್ಷ್ಮೀ ಚಂದ್ರಶೇಖರ್, ಪ್ರಾಂಶುಪಾಲ ನಟರಾಜ್, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಶಾಲೆ ಮಕ್ಕಳು ನಡೆಸಿಕೊಟ್ಟ ಪಥ ಸಂಚಲನ ಗಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net