ಶಾಲೆ, ಊರಿನ ಸಮಸ್ಯೆ ಬಿಚ್ಚಿಟ್ಟ ವಿದ್ಯಾರ್ಥಿಗಳು

25ss1makkala grama sabhe
ಬ್ಯಾಡಗೊಟ್ಟ ಗ್ರಾ.ಪಂ. ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆ.
Published on

ಶನಿವಾರಸಂತೆ: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ. ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಶಾಲೆಯ ಹಾಗೂ ಊರಿನ ಕುಂದು ಕೊರತೆ ಬಗ್ಗೆ ಮಕ್ಕಳು ಗಮನಸೆಳೆದರು.

ಗ್ರಾ.ಪಂ.ಅಧ್ಯಕ್ಷ ಮಹಮ್ಮದ್ ಹನೀಫ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸದರಿ ಗ್ರಾ.ಪಂ. ವ್ಯಾಪ್ತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳು ಪ್ರಸ್ತಾಪಿಸಿದ ಸಮಸ್ಯೆಗಳಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿಯ ಆಯಾಯ ವಾರ್ಡಿನ ಸದಸ್ಯರು, ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಮಹಮ್ಮದ್ ಹನೀಫ್ ಮಾತನಾಡಿ, ನಿಮ್ಮ ಊರಿನ ಸಮಸ್ಯೆಗಳನ್ನು ಗ್ರಾ.ಪಂ. ಇತಿಮಿತಿಯ ಅನುಸಾರವಾಗಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ದಿನೇಶ್‌ಕುಮಾರ್, ದೊಡ್ಡಯ್ಯ, ಪಾವನ ಮಾತನಾಡಿದರು. ಸಭೆಯಲ್ಲಿ ಸಿಆರ್‌ಪಿ ರವೀಶ್, ರಕ್ಷಿತ್, ಮೂರ್ತಿ, ರಾಧಾ ಮಾಹಿತಿ ನೀಡಿದರು. ಪಿಡಿಒ ಗಿರೀಶ್, ರಿಜ್ವಾನ್‌ಬಾನು, ತೇಜಾವತಿ, ರಾಜೇಶ್, ಸಚಿನ್, ರಂಜಿತಾ, ಜಯರಾಜ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net