ಗಣಿತ ಪರೀಕ್ಷೆ ಬರೆಯಲು ಓಡಿ ಬಂದ ವಿದ್ಯಾರ್ಥಿಗಳು

Students who ran to write the math exam
Students who ran to write the math exam
Published on

ಕೆರೂರ: ಇಲ್ಲಿನ ಎ.ಆರ್. ಹಿರೇಮಠ ಪ್ರೌಢ ಶಾಲೆಯಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಗೆ ವಿದ್ಯಾರ್ಥಿಗಳು ಓಡಿ ಓಡಿ ಬಂದರು.

ಕುಳಗೇರಿ ಕ್ರಾಸ್‌ನಿಂದ ಕೆರೂರಿಗೆ ಬರುವ ಹುಬ್ಬಳ್ಳಿ-ಬಾಗಲಕೋಟ, ಹುಬ್ಬಳ್ಳಿ- ವಿಜಯಪುರ ಬಸ್ಸುಗಳು ತಡವಾಗಿ ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ತೊಂದರೆ ಉಂಟಾಯಿತು. 15 ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಹಾಜರಾದರು.

ಇನ್ನೂ ನಾಲ್ಕು ಪರೀಕ್ಷೆಗಳಿವೆ. ಪ್ರತಿದಿನ ಬಸ್ಸಿನ ತೊಂದರೆಯಾದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ಥಳೀಯ ಸಾರಿಗೆ ಅಧಿಕಾರಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆಯನ್ನು ಮಾಡುಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net