ಅಂಗಡಿ ತೆರೆದು ವ್ಯಾಪಾರ ಮಾಡಿದ ವಿದ್ಯಾರ್ಥಿಗಳು

04 HRS 02
ಹಿರೀಸಾವೆಯ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ಸೊಪ್ಪು, ತರಕಾರಿ ವ್ಯಾಪಾರ ಮಾಡಿದರು.
Published on

ಹಿರೀಸಾವೆ: ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಂತೆ ನಡೆಯಿತು.

ವಿದ್ಯಾರ್ಥಿಗಳು ತೆಂಗಿನ ಕಾಯಿ, ಎಳನೀರು, ತರಕಾರಿ, ಬಿರಿಯಾನಿ, ಇಡ್ಲಿ, ಚರುಮುರಿ ಸೇರಿದಂತೆ ವಿವಿಧ ತಿಂಡಿಗಳು ಹಾಗೂ ಬಟ್ಟೆ, ಬ್ಯಾಂಗಲ್ಸ್ ಸೇರಿದಂತೆ ವಿವಿಧ ಅಂಗಡಿಗಳನ್ನು ತೆರೆದಿದ್ದು ಗ್ರಾಹಕರನ್ನು ಆಕರ್ಷಿಸಿ ವ್ಯಾಪಾರ ಮಾಡಿದ್ದು ವಿಶೇಷವಾಗಿತ್ತು.

ಕೆಲ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ತಯಾರಿಸುವ ಗುಡಿ ಕೈಗಾರಿಕೆಯ ವಸ್ತುಗಳಾದ ಮಣ್ಣಿನ ಲೋಟ, ಮಡಕೆ, ದೀಪ, ಕುಡಿಕೆ, ಭತ್ತದ ತೆನೆಯ ಅಲಂಕಾರಿ ವಸ್ತುಗಳನ್ನು ಸಂತೆಯಲ್ಲಿ ಇಟ್ಟು ಸಾರ್ವಜನಿಕರ ಗಮನ ಸೆಳೆದು ಉತ್ತಮ ವ್ಯಾಪಾರ ಮಾಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಮೌರ್ಯ, ಮುಖ್ಯಶಿಕ್ಷಕಿ ಉಮಾ, ಸಹಶಿಕ್ಷಕರಾದ ದೇವರಾಜು, ಎಲ್.ಎಸ್.ಧರ್ಮೇಶ್, ಎನ್.ಜಿ.ಶೋಭಾ, ಎಂ.ವಿನಯ, ಎಂ.ಬಿ.ಗೌರಮ್ಮ, ಆರ್.ಶೋಭಾ, ಆರೋಗ್ಯ ಸಮಿತಿ ಸದಸ್ಯ ರಘು, ಪ್ರಮುಖರಾದ ಕಾಂತರಾಜ್, ಶಂಕರೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net