ರಾಷ್ಟ್ರಮಟ್ಟಕ್ಕೆ ಕಲ್ಪತರು ವಿದ್ಯಾರ್ಥಿಗಳು

FotoJet (1)
Published on

ತಿಪಟೂರು: ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೇಕಥಾನ್​&2025ರಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್ಯೂನಿಟಿ ಮತ್ತು ಟೈಟನ್​ ಸಂಸ್ಥೆಗಳ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮೇಕಥಾನ್​-&2025 ತಾಂತ್ರಿಕ ಸ್ಪರ್ಧೆಯಲ್ಲಿ ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್​ ಇಂಜಿನಿರಿಂಗ್​ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ವಿಶ್ವನಾಥ್​ ಹಾಗೂ ಸಹ ಪ್ರಾಧ್ಯಾಪಕ ಸಿ.ಆರ್​.ಹರಿಕೇಶ ಅವರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳಾದ ಕೆ.ಎಸ್​.ಸಂಜು, ಪಿ.ಚಿದಾನಂದ, ಎಂ.ಎ.ಗಣೇಶ್​ ಮತ್ತು ಎಸ್​.ಕೆ.ಜೀವನ್​ ಅವರ ತಂಡವು ಸಣ್ಣ ಉದ್ದದ ಲೂಮ್​ನ (ಮಗ್ಗ) ವಿನ್ಯಾಸ ಮತ್ತು ಅಭಿವೃದ್ಧಿ ಎಂಬ ಪ್ರಾಜೆಕ್ಟ್​ ಮಂಡಿಸಿ ಪ್ರಥಮ ಬಹುಮಾನ ಪಡೆದಿದ್ದು, ಜನವರಿ 2026ರಲ್ಲಿ ಹೈದ್ರಾಬಾದ್​ನಲ್ಲಿ ನಡೆಯಲ್ಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕಾಲೇಜು ಪ್ರಾಂಸುಪಾಲ ಡಾ.ಎಚ್​.ಸಿ ಸತೀಶ್​ಕುಮಾರ್​, ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೆರುದ್ರಪ್ಪ, ಖಜಾಂಚಿ ಟಿ.ಎಸ್​.ಶಿವಪ್ರಸಾದ್​, ಉಪಾಧ್ಯಕ್ಷರಾದ ಬಾಗೇಪಲ್ಲಿ ಎಸ್​.ನಟರಾಜ್​, ಜಿ.ಪಿ.ದೀಪಕ್​, ಬಿ.ಎಸ್​.ಉಮೇಶ್​, ಟಿ.ಎಸ್​.ಬಸವರಾಜು, ಕಾರ್ಯದರ್ಶಿಗಳಾದ ಜಿ.ಎಸ್​.ಉಮಶಂಕರ್​, ಎಂ.ಆರ್​.ಸಂಗಮೇಶ್​, ಎಚ್​.ಜಿ.ಸುಧಾಕರ್​, ಟಿ.ಯು.ಜಗದೀಶ್​ಮೂರ್ತಿ, ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net