ದೇಶದ ಹಣೆಬರಹ ಬದಲಿಸುವ ವಿದ್ಯಾರ್ಥಿಗಳು

Students who change the destiny of the country
ವಿಜಯಪುರದ ಜೀವನ ದೀಪ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಚಂದ್ರಶೇಖರ ಮೋಗೇರ, ಹಾಸಿಂಪೀರ ವಾಲಿಕಾರ, ಎನ್.ಎಂ. ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ವಿದ್ಯಾರ್ಥಿಗಳೇ ನಮ್ಮ ದೇಶದ ಆಸ್ತಿ. ಅವರಿಗೆ ದೇಶದ ಹಣೆಬರಹ ಬದಲಾಯಿಸುವ ಜ್ಞಾನ ನೀಡಬೇಕು. ಅಲ್ಲದೆ, ದೇಶಭಕ್ತಿ, ಮಾನವೀಯ ಮೌಲ್ಯ ಹಾಗೂ ನೈತಿಕ ಮೌಲ್ಯ ಕಾಪಾಡುವ ಶಿಕ್ಷಣ ನೀಡಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ಜೀವನದೀಪ ಪಬ್ಲಿಕ್ ಶಾಲೆಯ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ದಿನಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿದೆ. ಆದರೆ ಗುಣಮಟ್ಟದ ಶಿಕ್ಷಣ ಕೊರತೆಯಿಂದ ವಿದ್ಯಾವಂತ ಯುವಕರು ನಿರುದ್ಯೋಗದಿಂದ ಬಳಲುವಂತಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ಧಶ್ರೀ ಅದ್ವೆತ ಆಶ್ರಯದ ಕವಿಶ್ರೀ ಸಂಗಮೇಶ ಶಿವಾಚಾರ್ಯರು ಮಾತನಾಡಿ, ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಭವಿಷ್ಯ ರೂಪಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಆಶೀರ್ವಚನ ನೀಡಿದರು.

ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ ಮಾತನಾಡಿ, ಈ ಸಂಸ್ಥೆಯ ವಿದ್ಯಾರ್ಥಿಗಳು ಎಂಬಿಬಿಎಸ್, ನವೋದಯ ಹಲವು ವಸತಿ ಶಾಲೆಗಳಿಗೆ ಪ್ರವೇಶ ಪಡೆದಿರುವುದು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಮೋಗೇರ, ಸುಧೀರ ಚಿಂಚಲಿ, ಸಿ.ಎಸ್. ಅವಟಿ, ರಮೇಶ ಅಣಜೀಕಾನೆ, ಎನ್.ಐ. ತಾಳಿಕೋಟೆ, ಜಗದೀಶ ಇಂಡಿ, ಸುರೇಶ ಅನಜೀಕಾನೆ, ಬಸವರಾಜ ಇಲಗೇರಿ, ಕಾಶಿನಾಥ ಮಸಳಿ, ನಿರ್ಮಲಾ ಹಜೇರಿ, ಶಿವನಗೌಡ ಬಿರಾದಾರ ಹಾಗೂ ಸುರೇಶ ಜತ್ತಿ ವೇದಿಕೆಯಲ್ಲಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net