ಗೋಣಿಕೊಪ್ಪ: ಅರಮೇರಿ ಅಕಾಡೆಮಿಕ್ ಸೆಂಟ್ರಲ್ ಎಜುಕೇಷನ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಅನುಭವಾತ್ಮಕ ಕಲಿಕೆ ಕಾರ್ಯಕ್ರಮ ಸಮಾರೋಪದಲ್ಲಿ ವಿದ್ಯಾರ್ಥಿಗಳು ವಿವಿಧ ಪಠ್ಯೇತರ ಚಟುವಟಿಕೆ ಮೂಲಕ ಗಮನ ಸೆಳೆದರು.
2019-20 ನೇ ಸಾಲಿನ ಅನುಭವಾತ್ಮಕ ಕಲಿಕಾ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಿ ವಿದ್ಯಾರ್ಥಿಗಳು ಪುಳಕಿತರಾದರು. ಒಂದನೇ ತರಗತಿಯಿಂದ ಎಂಟನೆ ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಯೂರೋಕಿಡ್ ಪ್ರಾಂಶುಪಾಲೆ ಪ್ರತಿಮಾ, ಗೋಣಿಕೊಪ್ಪ ಪ್ರೆಸ್‌ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಮೂರ್ನಾಡ್ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಸತೀಶ್, ನವೀನ್, ಅರಮೇರಿ ಅಕಾಡೆಮಿಕ್ ಸೆಂಟ್ರಲ್ ಎಜುಕೇಷನ್‌ನ ಪ್ರಾಂಶುಪಾಲ ಕೆ.ಪಿ.ಕುಸುಮ್ ಪಾಲ್ಗೊಂಡಿದ್ದರು.