ಮಾನವೀಯತೆಯ ಸೇವೆ ರೂಢಿಸಿಕೊಳ್ಳಿ

8 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವೈದ್ಯಕೀಯ ವೃತ್ತಿಯು ಸವಾಲಿನದು. ವೈದ್ಯಕೀಯ ಶಿಕ್ಷಣವು ಸ್ಥಿತಿಸ್ಥಾಪಕತ್ವ, ಸಮರ್ಪಣೆ ಮತ್ತು ಅಚಲ ನಿರ್ಣಯವನ್ನು ಬಯಸುತ್ತದೆ. ವಿದ್ಯಾರ್ಥಿಗಳು ಗುಣಪಡಿಸುವ ಮತ್ತು ಮಾನವೀಯತೆಯ ಸೇವೆಯನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಮಾಜಿ ಮಹಾಪೌರ ಈರೇಶ ಅಂಚಟಗೇರಿ ಹೇಳಿದರು.

ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಡಾ. ಬಿ.ಡಿ. ಜತ್ತಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಸ್ನಾತಕೋತ್ತರ ಸಂಶೋಧನಾ ಕೇಂದ್ರ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಪ್ರಾಣ, ಆರೋಗ್ಯ ರಕ್ಷಣೆಯ ಜವಾಬ್ದಾರಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲಿದೆ. ಶ್ರಮ ಪಟ್ಟು ಓದಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬೇಕು ಎಂದರು.

ಆಯುಷ್ ಇಲಾಖೆಯ ಸಹ ನಿರ್ದೇಶಕ ಡಾ. ಶ್ರೀಧರ ಮಾತನಾಡಿ, ಸೋತಾಗ ಹಿಂಜರಿಯದೆ ಮತ್ತೊಂದು ಪ್ರಯತ್ನ ಮಾಡುವುದು ಯಶಸ್ಸಿನ ಮೆಟ್ಟಿಲು ಎಂದರು.

ಡಾ. ಶಾಹಿದಾ, ಜಗದೀಶ ಮಳಗಿ, ರಾಧಾಕೃಷ್ಣನ್, ಡಾ. ವೈಷ್ಣವ ಸತೀಶ, ಬಸವರಾಜ ವಸ್ತçದ, ಉಮಾ ಚವ್ಹಾಣ, ಡಾ. ಎಸ್.ಟಿ. ಹೊಂಬಳ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net