ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

28 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವೈದ್ಯರು ರೋಗಿಗಳಿಗೆ ಅಮೂಲ್ಯವಾದ ಆರೋಗ್ಯ ನೀಡಬೇಕು. ಉತ್ತಮ ವೈದ್ಯರಾಗಲು ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಎಸ್​ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ ಕುಮಾರ್​ ಹೇಳಿದರು.

ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜು ವತಿಯಿಂದ ಇಲ್ಲಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒಳ್ಳೆ ಅಭ್ಯಾಸಗಳು ಮತ್ತು ಉತ್ತಮ ನಿದ್ರೆಯು ವೃತ್ತಿಯ ಜತೆಗೆ ಸರ್ವಾಂಗೀಣ ವ್ಯಕ್ತಿತ್ವಕ್ಕೆ ಸಹಾಯ ಮಾಡುತ್ತದೆ. ಉತ್ತಮ ರೀತಿಯಲ್ಲಿ ಅಧ್ಯಯನ ಮಾಡುವುದಕ್ಕೆ ನಿರಂತರ ಓದುವಿನ ನಡುವೆ ಮಧ್ಯಂತರ ವಿರಾಮವೂ ಅಗತ್ಯ. ಶಿಕ್ಷಣದ ಉದ್ದೇಶ ಅರ್ಥಮಾಡಿಕೊಂಡು, ಹೇಗೆ ಅಧ್ಯಯನ ಮಾಡಬೇಕು ಎಂಬುದನ್ನು ತಿಳಿಯಬೇಕು ಎಂದರು.

ಪದ್ಮಲತಾ ನಿರಂಜನ್​ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ವಿತರಿಸಿದರು. ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್​, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಇತರರು ಇದ್ದರು.

ಕಾಲೇಜಿನ ಪ್ರಾಚಾರ್ಯೆ ಡಾ. ರತ್ನಮಾಲಾ ದೇಸಾಯಿ ಸ್ವಾಗತಿಸಿದರು. ಡಾ. ಶ್ವೇತಾ ಪ್ರಭು ಮತ್ತು ಡಾ. ಸುಘೋಷ ಕುಲಕರ್ಣಿ ನಿರೂಪಿಸಿದರು. ಡಾ. ವಿಜಯ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net