‘ಸಿತಾರೆ ಜಮೀನ್ ಪರ ಸಿನಿಮಾ’ ವೀಕ್ಷಿಸಿದ ವಿದ್ಯಾರ್ಥಿಗಳು

IMG20250711141627.jpg
Published on

ಬೆಳಗಾವಿ: ನಾಗನೂರು ರುದ್ರಾಕ್ಷಿ ಮಠದಲ್ಲಿ ನಾಡಿನ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಲಾದ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯದ 100 ವಿದ್ಯಾರ್ಥಿಗಳು ಈಚೆಗೆ ಸಿತಾರೆ ಜಮೀನ್ ಪರ ಸಿನಿಮಾ ವೀಕ್ಷಿಸಿದರು. ದೈಹಿಕ ಮತ್ತು ಮಾನಸಿಕ ನ್ಯೂನತೆ ಹೊಂದಿದ ವಿಶೇಷ ಮಕ್ಕಳ ಈ ಚಲನಚಿತ್ರವನ್ನು ನೋಡಿ ವಿದ್ಯಾರ್ಥಿಗಳು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಲಿ ಎಂಬ ಸದುದ್ದೇಶದಿಂದ ನಗರದ ಲಿಂಗಾಯತ ಮಹಿಳಾ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ವ್ಯವಸ್ಥೆ ಕಲ್ಪಿಸಿದ್ದರು. ಶರಣ ಸಂಸ್ಕೃತಿ ಪ್ರತಿಪಾದಕರಾದ ಶೈಲಜಾ ಭಿಂಗೆ, ಗಾಯಕಿ ನೈನಾ ಗಿರಿಗೌಡರ ಪ್ರಾಯೋಜಕತ್ವ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕಿ ಭಾರತಿ ಮಠದ ಮಕ್ಕಳಿಗೆ ವಿಶೇಷ ತಿಂಡಿ ವಿತರಿಸಿದರು. ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ಕಾರ್ಯದರ್ಶಿ ರಕ್ಷಾ ದೇಗಿನಹಾಳ, ಶಾರದಾ ಭೋಜ ಇತರ ಪದಾಧಿಕಾರಿಗಳು ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net