ವಿಜ್ಞಾನ ಕೇಂದ್ರದಲ್ಲಿ ವಿದ್ಯರ‍್ಥಿಗಳಿಂದ ಚಂದ್ರಗ್ರಹಣ ವೀಕ್ಷಣೆ

raichur
raichur
Published on

ರಾಯಚೂರು ರಾಹುಗ್ರಸ್ತ ರಕ್ತ ಚಂದ್ರಗ್ರಹಣ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ನಗರದ ವಿಜ್ಞಾನ ಕೇಂದ್ರದಲ್ಲಿ ವಿದ್ಯರ‍್ಥಿಗಳು ಒಳಗೊಂಡು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು ದೂರರ‍್ಶಕಗಳ ಮೂಲಕ ಚಂದ್ರಗ್ರಹಣದ ವೀಕ್ಷಣೆ ನಡೆಸಿದರು.

ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಅವರ ಮರ‍್ಗರ‍್ಶನದಲ್ಲಿ ಈ ಕರ‍್ಯಕ್ರಮವನ್ನು ರಾಯಚೂರು ಮಹಾನಗರ ಪಾಲಿಕೆಯು ವಿಶೇಷವಾಗಿ ರೂಪಿಸಿತ್ತು. ವಿಜ್ಞಾನದ ವಿಶೇಷತೆ, ಜನಸಹಭಾಗಿತ್ವ ಮತ್ತು ನಾಗರಿಕ ಜಾಗೃತಿಯ ಪ್ರತೀಕವಾಗಿ ಕರ‍್ಯಕ್ರಮವು ಗಮನ ಸೆಳೆಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,


ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ರ‍್ಗಗಳ ಕಲ್ಯಾಣ ಇಲಾಖೆ ಮತ್ತು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಗಳ ಸಹಯೋಗದಲ್ಲಿ ಈ ಕರ‍್ಯಕ್ರಮ ನಡೆಯಿತು. ವಿದ್ಯರ‍್ಥಿಗಳು, ಶಿಕ್ಷಕರು ಮತ್ತು ಸರ‍್ವಜನಿಕರು ಅಪರೂಪದ ಖಗೋಳದ ಘಟನಾವಳಿ ವೀಕ್ಷಿಸಲು ಉತ್ಸಾಹದಿಂದ ಭಾಗವಹಿಸಿದ್ದರು.

ವಿಜ್ಞಾನ ವಿಷಯದ ಶಿಕ್ಷಕರು, ತಜ್ಞರು ಚಂದ್ರಗ್ರಹಣದ ವೈಜ್ಞಾನಿಕ ಅಂಶಗಳನ್ನು ಸರಳವಾಗಿ ವಿವರಿಸಿದರು. ಹಲವಾರು ವಿದ್ಯರ‍್ಥಿಗಳು ಮೊದಲ ಬಾರಿಗೆ ದೂರರ‍್ಶಕದ ಮೂಲಕ ಚಂದ್ರನ ಬದಲಾದ ಹಂತಗಳನ್ನು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net