

ಹೊಸಕೋಟೆ : ವಿದ್ಯಾರ್ಥಿಗಳು ಶಾಲಾ&ಕಾಲೇಜು ಹಂತದಿಂದಲೇ ವೈಜ್ಞಾನಿಕ ಮನೋಭಾವ ರೂಢಿಸಿಕೊಂಡು ಮೌಢ್ಯತೆ ವಿರುದ್ಧ ಸಮರ ಸಾರಬೇಕು ಎಂದು ವಿಜ್ಞಾನ, ತಂತ್ರಜ್ಞಾನ ಅಕಾಡೆಮಿ ರಾಜ್ಯ ನಿರ್ದೇಶಕ ಡಾ.ಹುಲಿಕಲ್ ನಟರಾಜು ತಿಳಿಸಿದರು. ತಿರುಮಲ ಶೆಟ್ಟಿಹಳ್ಳಿ ಕ್ರಾಸ್ನಲ್ಲಿರುವ ವಿದ್ಯಾವನ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಶೈಕ್ಷಣಿಕ ಕಾರ್ಯಕ್ರಮ ಆರಂಭ&2025 ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಮೌಢ್ಯತೆಯೂ ಬೆಳೆಯುತ್ತಿದೆ. ನಾವೆಲ್ಲ 20ನೇ ಶತಮಾನದಲ್ಲಿದ್ದು ಮಂಗಳ ಗ್ರಹದಲ್ಲಿ ಮನೆ ಮಾಡಿ ವಾಸಿಸಲು ಹೊರಟಿದ್ದೇವೆ. ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮೌಢ್ಯತೆ ಎಂಬ ಮಾರಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಅತ್ಯಾಚಾರ, ವ್ಯಬಿಚಾರ, ಮನೋವಿಕೃತಿ, ಮಾನಸಿಕ ದೌರ್ಬಲ್ಯ ಹೆಚ್ಚಾಗುತ್ತಿದೆ. ಕಡಿವಾಣ ಹಾಕಲು ಮೌಢ್ಯ ವಿರೋಧಿ ಪ್ರತಿಬಂಧಕ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಎಲ್ಲ ಕಡೆ ನೇತು ಹಾಕಿರುವ ಮಂತ್ರ&ತಂತ್ರ, ಜ್ಯೋತಿಷ್ಯಗಳ ಬೋರ್ಡ್ ಹಾಗೂ ಜಾಲತಾಣಗಳಲ್ಲಿನ ಜಾಹೀರಾತು ಕಾನೂನಿನಡಿ ರ್ನಿಬಂಧಿಸಬೇಕು ಎಂದರು. ವಿದ್ಯಾವನ ಕಾಲೇಜು ಪ್ರಾಂಶುಪಾಲ ಬೈರಾರೆಡ್ಡಿ ಜಿ.ಮಾತನಾಡಿ, ಪಾಲಕರು ದುಡಿಮೆಯ ಶೇ.80 ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯಯ ಮಾಡುತ್ತಿದ್ದಾರೆ.ಕಾರಣ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಳ್ಳಲಿ ದೃಷ್ಟಿಯಿಂದ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಂಡು ಸಮಾಜದ ಆಧಾರ ಸ್ತಂಭವಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಪ್ರಾತ್ಯಕೆ : ಕಾರ್ಯಕ್ರಮದಲ್ಲಿ ನೀರಿನಿಂದ ದೀಪ ಉರಿಸುವುದು, ತೆಂಗಿನಕಾಯಿಯಿಂದ ಹೂವು ಬರಿಸುವುದು, ಕುದಿಯುವ ಎಣ್ಣೆಯಲ್ಲಿ ಕೈ ಹಾಖುವುದು, ಬೆಂಕಿಯಲ್ಲಿ ನಡೆಯುವುದು, ಮೈಗೆ ಬೆಂಕಿ ಹಚ್ಚಿಕೊಳ್ಳುವುದು ಹೀಗೆ ಹಲವು ಪವಾಡಗಳ ಹಿಂದಿನ ಡಾಂಭಿಕತೆ ಮತ್ತು ರಹಸ್ಯ ಭೇದಿಸುವುದರ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕೆ ಮೂಲಕ ಬಯಲು ಮಾಡಿ ತೋರಿಸಿದರು.
ಶಿಕ್ಷಣ ಕ್ಷೇತ್ರವು ವ್ಯಾಪಾರಿಕರಣವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿದ್ಯಾವನ ಕಾಲೇಜು ಮುಂದಾಗಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ತಿರುಪತಿ ಯುನಿವರ್ಸಿಟಿಯಲ್ಲಿ ಐಐಟಿ ವ್ಯಾಸಂಗ ಮಾಡುತ್ತಿದ್ದಾನೆ. ಇದೆಲ್ಲಾ ನಮಗೆ ಹೆಗ್ಗಳಿಕೆ. > ಸುಜಾತಾರೆಡ್ಡಿ ವಿದ್ಯಾವನ ಕಾಲೇಜು ಅಧ್ಯೆ