ವಿದ್ಯಾರ್ಥಿಗಳಿಂದ ಮುದ್ರಣ ಘಟಕ ವೀಕ್ಷಣೆ,  ಖುಷಿ ಹಂಚಿಕೊಂಡ ಕಲಘಟಗಿ ಗುಡ್ ನ್ಯೂಸ್ ಕಾಲೇಜಿನ ಬಿಕಾಂ ಸ್ಟೂಡೆಂಟ್ಸ್

IMG-20250502-WA0017.jpg
Published on

ಹುಬ್ಬಳ್ಳಿ: ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಸದಾ ಹೊಸತನಕ್ಕೆ ತೆರೆದುಕೊಂಡು ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದ್ದು, ಇದೀಗ ವಿದ್ಯಾರ್ಥಿಗಳಿಗೆ ಮುದ್ರಣ ಘಟಕ ವೀಕ್ಷಣೆಗೆ ಕರೆದೊಯ್ಯುವ ಮೂಲಕ ಅವರಿಗೆ ಹೊಸ ಲೋಕದ ಪರಿಚಯ ಮಾಡಿದೆ.

ಕಲಘಟಗಿ ತಾಲೂಕಿನ ಗುಡ್ ನ್ಯೂಸ್ ವೆಲ್ ಫೇರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳು ಶುಕ್ರವಾರ ವರೂರಿನ ವಿಜಯವಾಣಿ ಮುದ್ರಣ ವಿಭಾಗಕ್ಕೆ ಭೇಟಿ ನೀಡಿದರು. ಮಾಧ್ಯಮ ಸಂಸ್ಥೆ ಹಾಗೂ ಅದರ ಮುದ್ರಣ ಕಾರ್ಯವನ್ನು ವೀಕ್ಷಣೆ ಮಾಡುವ ಮೂಲಕ ಹೊಸಹೊಸ ವಿಷಯಗಳನ್ನು ತಿಳಿದುಕೊಂಡರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಪತ್ರಿಕಾರಂಗವು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಂತರ ಎಷ್ಟು ಮಹತ್ವದ್ದು ಎಂಬುದನ್ನು ಅರಿತುಕೊಂಡರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುದ್ರಣದ ವಿವಿಧ ಶಾಖೆಗಳನ್ನು ನೋಡಿದರು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪತ್ರಿಕೆ ಹೇಗೆಲ್ಲ ಆಕರ್ಷಕವಾಗಿ ಮೂಡಿಬರುತ್ತದೆ ಎನ್ನುವುದನ್ನು ಸ್ವತಃ ತಿಳಿದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net