ವಿದ್ಯಾರ್ಥಿಗಳೇ ಪರೀಕ್ಷೆಯ್ನು ಹಬ್ಬದಂತೆ ಪರಿಗಣಿಸಿ

bhr train
ಗಬ್‌ಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪರೀಕ್ಷಾ ಸಿದ್ಧತಾ ಶಿಬಿರದಲ್ಲಿ ತರಬೇತಿ ನೀಡಿದ ತರಬೇತುದಾರ ಡಾ. ನವೀನ್ ಲಾಯ್ಡ ಮಿಸ್ಕಿತ್ ಅವರನ್ನು ಸನ್ಮಾನಿಸಲಾಯಿತು. ಡಿ.ರಾಜೇಂದ್ರ, ಚೈತನ್ಯ ವೆಂಕಿ, ರಮೇಶ್ ನಾಯಕ್, ಜೆ.ಬಿ.ಮಿಸ್ಕಿತ್ ಇತರರಿದ್ದರು.
Published on

ಬಾಳೆಹೊನ್ನೂರು: ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಮನೆಯ ಹಬ್ಬದಂತೆ ಪರಿಗಣಿಸಬೇಕು ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಡಾ. ನವೀನ್ ಲಾಯ್ಡ ಮಿಸ್ಕಿತ್ ಹೇಳಿದರು.

ಗಬ್‌ಗಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಸಿದ್ಧತಾ ಶಿಬಿರದಲ್ಲಿ ತರಬೇತಿ ನೀಡಿ ಮಾತನಾಡಿದರು.
ಮಸ್ತಕದಿಂದ ಪುಸ್ತಕಕ್ಕೆ ತರುವ ಕ್ರಿಯೆಯೇ ಪರೀಕ್ಷೆಯಾಗಿದ್ದು, ಉತ್ಸಾಹ, ಸಕಾರಾತ್ಮಕವಾಗಿ ಎದುರಿಸಬೇಕು. ದಿನದ ಪಾಠವನ್ನು ಅಂದೇ ಅಭ್ಯಾಸ ಮಾಡಬೇಕು. ನಂತರ ಪರೀಕ್ಷೆ ಹೇಗೆ ಬರೆಯಬೇಕು ಎಂಬುದನ್ನು ಅರಿತುಕೊಳ್ಳಬೇಕು. ಪರೀಕ್ಷೆಯ ಕುರಿತು ಕೆಲವು ಸೂತ್ರಗಳನ್ನು ಅಳವಡಿಸಿಕೊಂಡಿರಬೇಕು. ಸಮಯ ನಿರ್ವಹಣೆ ಮುಖ್ಯ. ಅಗತ್ಯ ವಿಷಯಗಳನ್ನು ಮಾತ್ರ ಬರೆದಾಗ ಹೆಚ್ಚಿನ ಅಂಕ ದೊರೆಯಲು ಸಾಧ್ಯ. ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಅನಗತ್ಯ ಭಯ, ಒತ್ತಡ ಹಾಕಬಾರದು ಎಂದು ಸಲಹೆ ನೀಡಿದರು.
ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ ಮಾತನಾಡಿ, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ದೃಶ್ಯಮಾಧ್ಯಮಗಳನ್ನು ವೀಕ್ಷಿಸದೆ ಓದಿನಲ್ಲಿ ತಲ್ಲೀನರಾಗಬೇಕು. ಪ್ರತಿದಿನ ಓದಿ ಬರೆದು ಅಭ್ಯಾಸ ಮಾಡಿಕೊಳ್ಳಬೇಕು. ಇಂಥ ತರಬೇತಿ ಶಿಬಿರಗಳು ಭಯ ನಿವಾರಣೆಗೆ ಸಹಕಾರಿಯಾಗಿವೆ ಎಂದರು.
ಕಾಫಿ ಬೆಳೆಗಾರ ಜೆ.ಬಿ.ಮಿಸ್ಕಿತ್, ಎನ್.ಆರ್.ಪುರ ತಾಲೂಕು ಚುಸಾಪ ಅಧ್ಯಕ್ಷ ಚೈತನ್ಯ ವೆಂಕಿ, ಮುಖ್ಯಶಿಕ್ಷಕ ರಮೇಶ್ ನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net