

ಅಥಣಿ ಗ್ರಾಮೀಣ: ಹದಿನೆಂಟು ವರ್ಷ ತುಂಬಿದ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ವಾಣಿ ಯು. ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ, ನಂದಗಾಂವ ಸೇರಿ ಹಲವು ಗ್ರಾಮಗಳಲ್ಲಿರುವ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಾಲೂಕಾಡಳಿತ ಅಥಣಿ ಹಾಗೂ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಮತದಾನದ ಮೂಲಕ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮುಕ್ತ ಅವಕಾಶ ಇದೆ. ಅರ್ಹರು ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದು ಹಾಕಬಹುದು. ಅಂಗವಿಕಲರನ್ನು ಮತದಾರರ ಪಟ್ಟಿಯಲ್ಲಿ ತರಲು ವಿಶೇಷ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯ ಮತದಾನ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಕಂದಾಯ ನಿರೀಕ್ಷಕ ಶಿವಾನಂದ ಮೆಣಸಂಗಿ ಮಾತನಾಡಿದರು.ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಪ್ರಾಚಾರ್ಯ ಸಿದ್ದರಾಮ ಯರನಾಳ, ಡಿ.ಎಸ್. ಹುಲ್ಲೇಣ್ಣವರ, ಡಾ. ಸತೀಶ ಮೋಹಿತೆ, ಪರಪ್ಪ ಮಗದುಮ್ಮ, ಕಪಿಲ ಕಾಂಬಳೆ, ಕುಮಾರ ತಕತರಾವ, ಪ್ರಶಾಂತ ಬಡಿಗೇರ, ಎಂ.ಪಿ. ಮೇತ್ರಿ, ಟಿ.ಆರ್. ಆಲಕನೂರ, ಶ್ರೀಪಾದ ಕುಲಕರ್ಣಿ, ಎನ್.ಜಿ. ಕಾಂಬಳೆ, ಎ.ಡಿ. ಹಿರಗೆಪ್ಪಗೋಳ, ಕಾರ್ಯದರ್ಶಿ ಜಯಪಾಲ ದುರ್ಗಣ್ಣವರ, ದುಂಡಪ್ಪ ದೊಡಮನಿ, ಬಿ.ಜಿ. ಕಾಂಬಳೆ, ಆರ್.ಎಚ್. ಸನದಿ ಇತರರಿದ್ದರು.