ವಿದ್ಯಾರ್ಥಿಗಳೇ, ಮೊಬೈಲ್​ ವ್ಯಾಮೋಹ ಬಿಡಿ

05 07 2025_BGR RURAL_PAGE_5A
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಧರ್ಮಸಾಗರ ಪ್ರೌಢಶಾಲೆಯ ವಿದ್ಯಾರ್ಥಿ ಸಂದ ಉದ್ಘಾಟನಾ ಸಮಾರಂಭದಲ್ಲಿ ಪ್ರೋತ್ಸಾಹ ಧನ ನೀಡಲಾಯಿತು. ಧರ್ಮಸಾಗರ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಅಶ್ವತ್ಥ ನಾರಾಯಣ ರೆಡ್ಡಿ, ಕಾರ್ಯದರ್ಶಿ ಬಿ.ವಿಶಾಂತಕುಮಾರ್​, ಸದಸ್ಯರಾದ ಡಿ.ಸಿ.ಮನೋಹರ್​, ಡಿ.ಎಸ್​ ಕೃಷ್ಣಪ್ಪ, ಇದ್ದರು.
Published on

ಸರ್ಜಾಪುರ : ಮಕ್ಕಳ ಅಭ್ಯುಧ್ಯೇಯಕ್ಕಾಗಿ ಪಾಲಕರು ಸರ್ವಸ್ವವನ್ನು ತ್ಯಾಗ ಮಾಡಿ ಪೋಷಿಸಿ, ಶಿಕ್ಷಣ ನೀಡಿದರೆ ಮಕ್ಕಳು ಸಾಧನೆ ಮಾಡುವುದನ್ನು ಕೈ ಬಿಟ್ಟು ಪಾಲಕರನ್ನು ನಿಂದಿಸಿ, ಹೆತ್ತವರನ್ನೇ ಮರೆಯುತ್ತಿರುವುದು ವಿಷಾದಕರ ಎಂದು ಚಿಂತಕ ಬಿ.ಸುರೇಶ್​ ಗೌಡ ಕಳವಳ ವ್ಯಕ್ತಪಡಿಸಿದರು.

ಆನೇಕಲ್​ ತಾಲೂಕು ಸರ್ಜಾಪುರ ಸಮೀಪದ ದೊಮ್ಮಸಂದ್ರದ ಧರ್ಮಸಾಗರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಧರ್ಮಸಾಗರ ಪ್ರೌಢಶಾಲೆಯ ವಿದ್ಯಾರ್ಥಿ ಸಂದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಲಕರು, ಸಂ&ಸಂಸ್ಥೆಗಳು ಹಾಗೂ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸುತ್ತಾರೆ. ಆದರೆ ಶೇ.10 ವಿದ್ಯಾರ್ಥಿಗಳು ಸಾಧನೆಯ ದಾರಿ ಹಿಡಿದರೆ, ಶೇ.90 ವಿದ್ಯಾರ್ಥಿಗಳು ಕೈಕಟ್ಟಿ ಕೂರುತ್ತಾರೆ. ಜಗತ್ತಿನಲ್ಲಿ ಬಹುತೇಕ ಸಾಧಕರು ಕಡು ಬಡತನದಲ್ಲಿ ಜೀವನವನ್ನು ಸಾಗಿಸಿ ಸಾಧನೆ ಮಾಡಬೇಕೆಂಬ ಅಚಲ ಗುರಿಯೊಂದಿಗೆ ಉನ್ನತ ಹುದ್ದೆ ಅಲಂಕರಿಸಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ದಾರಿದೀಪವಾಗಿದ್ದಾರೆ. ಆದರೆ ಪ್ರಸ್ತುತ ವಿದ್ಯಾರ್ಥಿಗಳು ಮೊಬೈಲ್​ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ ಎಂದರು.

ಧರ್ಮಸಾಗರ ಪ್ರೌಢಶಾಲೆಯ 1990&93ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಎಜುಕೇಶನ್​ ಚಾರಿಟೆಬಲ್​ ಟ್ರಸ್ಟ್​ ಅಧ್ಯಕ್ಷ ಕೇಶವ್​ ಬಾಬುರೆಡ್ಡಿ, ಖಜಾಂಚಿ ಪ್ರಭಾಕರ್​ ರೆಡ್ಡಿ, ಕಾರ್ಯದರ್ಶಿ ವಿಷ್ಣು ಶರ್ಮ, ಸದಸ್ಯರಾದ ಕೆ.ಸುರೇಶ್​ ವೇಣು, ಡಿಸಿ.ರುದ್ರೇಶ್​, ಸೋಮ ಸುಂದರ್​, ಕೇಶವ ರೆಡ್ಡಿ, ಹರೀಶ್​, ಟೈಲರ್​ ಸುರೇಶ್​, ನಾಗರಾಜು, ಪ್ರಕಾಶ್​, ಪ್ರೇಮಾ, ಲತಾ, ಮೀನಾ, ಮಂಜುಳಾ, ಮುಖ್ಯಶಿಕ್ಷಕಿ ಎಂ.ಶ್ರೀವಿದ್ಯಾ, ಶಿಕ್ಷಕ ಕೆ.ಆರ್​.ಈಶ್ವರಪ್ಪ ಇದ್ದರು. ಧರ್ಮಸಾಗರ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಗೊಂಡ ಶಿಕ್ಷಕ ಆರ್​.ಪ್ರಭಮಣಿ ಅವರನ್ನು ಆಡಳಿತ ಮಂಡಳಿಯು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಸುಮಾರು 50 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸತ್ಕರಿಸಲಾಯಿತು.

ಉಚಿತ ಶಿಕ್ಷಣ : ಈ ಶಿಕ್ಷಣ ಸಂಸ್ಥೆಯು ಗ್ರಾಮೀಣ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಶಾಲಾ ಆಡಳಿತ ಮಂಡಳಿಯು ಧರ್ಮಸಾಗರ ಪ್ರೌಢಶಾಲೆಗೆ 8 ಮತ್ತು 9ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಶೂನ್ಯ ಶೂಲ್ಕ ವಿಧಿಸಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದು ಧರ್ಮಸಾಗರ ವಿದ್ಯಾಸಂಸ್ಥೆಯ ಖಜಾಂಚಿ ಡಿವಿ.ಧನರಾಜ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net