ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿರಿ

2KKR1
Published on

ಕಕ್ಕೇರಿ: ವಿದ್ಯಾರ್ಥಿಗಳು ಸಿಗರೇಟು, ತಂಬಾಕು, ಗುಟ್ಕಾ ಸೇರಿದಂತೆ ಮಾದಕ ವಸ್ತುಗಳ ಸೇವನೆಯ ದುಶ್ಚಟಗಳಿಂದ ದೂರವಿರಬೇಕು. ಒಂದು ವೇಳೆ ಅಂತಹ ಟನೆಗಳು ಕಂಡುಬಂದರೆ ಶಿಕರ ಗಮನಕ್ಕೆ ತರಬೇಕು ಎಂದು ನಂದಗಡ ಠಾಣೆ ಪಿಎಸ್​ಐ ಎಸ್​.ಎಸ್​.ಬದಾಮಿ ತಿಳಿಸಿದರು.

ಸಮೀಪದ ಗೋದೋಳಿ ಗ್ರಾಮದ ಸಯಾದ್ರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಯಿಂದ ನೂರು ಅಡಿ ಒಳಗಡೆ ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ನಂದಗಡ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಸಂಚಾಲಕ ದತ್ತಾ ಬಿಡಕರ ಮಾತನಾಡಿದರು. ಮುಖ್ಯ ಶಿಕ್ಷಕ ಎನ್​.ಎ.ಪಾಟೀಲ, ಶಿಕರಾದ ಎನ್​.ಟಿ.ಪಾಟೀಲ, ಎಚ್​.ಎಸ್​.ಕರಂಬಳಕರ, ಎನ್​.ಬಿ.ಜಾಧವ, ಜೆ.ಎ.ಪಾಟೀಲ, ಬಿ.ಪಿ.ಕಿತ್ತೂರ, ಆರ್​.ಎ.ಗುರವ, ಗ್ರಾಪಂ ಸದಸ್ಯ ನಾಗೇದ್ರ ತಾಂಬಿಟಕರ, ಸುಧೀರ ಚವ್ಹಾಣ, ಬಾಲಕೃಷ್ಣ ಸುತಾರ, ಭೀಮಪ್ಪ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net