ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ

9hos1p jsi hos
ಹೊಸನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುದ್ಧ ನೀರಿನ ಘಟಕಕ್ಕೆ ನ್ಯಾಯಾಧೀಶ ರವಿಕುಮಾರ್ ಚಾಲನೆ ನೀಡಿದರು. ಡಾ. ವಿನಯ್, ಮೋಹನ ಶೆಟ್ಟಿ, ರೇಣುಕೇಶ್, ಸಾಹಿನಾ ನಾಸಿರ್ ಇತರರಿದ್ದರು.
Published on

ಹೊಸನಗರ: ವಿದ್ಯಾರ್ಥಿಗಳು ಬದುಕಿಗೆ ಅಗತ್ಯತೆಗಳು ಮತ್ತು ಅವುಗಳ ಸಂರಕ್ಷಣೆ ಬಗ್ಗೆ ಅರಿವು ಹೊಂದಬೇಕು ಹೊಸನಗರದ ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಜೆಸಿಐ ಹೊಸನಗರ, ಕೊಡಚಾದ್ರಿ ಸಂಸ್ಥೆ ಕೊಡುಗೆಯಾಗಿ ನೀಡಿದ ಶಾಶ್ವತ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ, ನಮ್ಮ ಅಗತ್ಯಗಳನ್ನು ಪೂರೈಸಲು ಪರಿಸರ ಸಂರಕ್ಷಣೆ ಅಗತ್ಯ ಎಂದರು.
ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ವಿದ್ಯೆ ಮೇಲೆ ಗಮನ ಕೇಂದ್ರೀಕರಿಸಬೇಕು. ಶಾಲೆಯಲ್ಲಿ ಅನವಶ್ಯಕ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು. ಅಕ್ರಮ ಚಟುವಟಿಕೆ, ಪರಿಸರ ನಾಶ ಕಂಡು ಬಂದರೆ ಕಾನೂನು ಸೇವಾ ವಿಭಾಗಕ್ಕೆ ಮಾಹಿತಿ ನೀಡಿ ಎಂದರು.
ಮೂಳೆ ತಜ್ಞ ಡಾ. ವಿನಯ್ ಮಾತನಾಡಿ, ವಿದ್ಯಾರ್ಥಿಗಳು ಸೇವಿಸುವ ನೀರಿನ ಬಗ್ಗೆ ಜಾಗೃತಿ ವಹಿಸಬೇಕು. ಕಲುಷಿತ ನೀರಿನ ಸೇವನೆಯಿಂದ ಮಾರಣಾಂತಿಕ ರೋಗಕ್ಕೆ ತುತ್ತಾಗಬೇಕಾಗುತ್ತದೆ. ಈ ಹಿನ್ನೆಲೆ ಜೆಸಿಐ ಶುದ್ಧ ನೀರಿನ ಘಟಕ ಒದಗಿಸಿರುವುದನ್ನು ಶ್ಲಾಘನೀಯ ಎಂದರು.
ಜೆಸಿಐ ಹೊಸನಗರ ಕೊಡಚಾದ್ರಿಯ ಅಧ್ಯಕ್ಷ ವಕೀಲ ಮೋಹನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ವೈ.ಕೆ.ಶಿವಾನಂದ್, ಮುಖ್ಯಶಿಕ್ಷಕ ರೇಣುಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಸಾಹಿನಾ ನಾಸಿರ್, ಕಾರ್ಯದರ್ಶಿ ಸಂತೋಷ ಶೇಟ್ ಇತರರಿದ್ದರು. ಅಂಜಲಿ ಅಶ್ವಿನ್ ಸ್ವಾಗತಿಸಿದರೆ, ಕೆ.ಕೆ.ಗಿರೀಶ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net