ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿ

ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಆಂಟೋನಿ ವಿವಿಯನ್ ಆಲ್ವಾರಿಸ್ ಉದ್ಘಾಟಿಸಿದರು.
ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಆಂಟೋನಿ ವಿವಿಯನ್ ಆಲ್ವಾರಿಸ್ ಉದ್ಘಾಟಿಸಿದರು.
Published on

 ಗೋಣಿಕೊಪ್ಪಲು: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ನೆಲ್ಲಿ-ಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಆಂಟೋನಿ ವಿವಿಯನ್ ಆಲ್ವಾರಿಸ್ ಹೇಳಿದರು.

ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ, ದೇಶ ಭಕ್ತಿ ಬೆಳೆಸಿಕೊಳ್ಳುವ ಮೂಲಕ ಉತ್ತಮ ಸಮಾಜ ಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕು. ಕಾಲೇಜಿನ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಜತೆಗೆ ವಿದ್ಯಾರ್ಥಿ ದಿಸೆಯಿಂದಲೇ ಜೀವನೋಪಾಯ ಕೌಶಲವನ್ನು ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಜಿ. ಎನ್.ನಾಗೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಆರ್.ರಮೇಶ್ ಮಾತಾಡಿದರು. ಪಿ.ವಿ.ಲೋಕೇಶ್ ಅತಿಥಿಗಳ ಪರಿಚಯ ಮಾಡಿದರೆ, ಸುಜಾತಾ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾಲೇಜು ವಿದ್ಯಾರ್ಥಿ ನಾಯಕನಾಗಿ ಸಿದ್ದಿಕ್, ನಾಯಕಿಯಾಗಿ ಕೆ.ಜೆ.ಮೀರಾ, ಕ್ರೀಡಾ ಮಂತ್ರಿಯಾಗಿ ಪವನಾ ಮತ್ತು ಲಕ್ಷ್ಮೀ, ಶಿಸ್ತು ಮಂತ್ರಿಯಾಗಿ ಜಿ.ಎಸ್.ಚಂದನ್, ಮಹಮದ್ ರಹೀಶ್, ಧನ್ಯ ಕಲ್ಕರ್ ಮತ್ತು ನಿತ್ಯ ಅವರನ್ನು ಆಯ್ಕೆ ಮಾಡಲಾಯಿತು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಎಸ್.ಕುಶಾಲಪ್ಪ, ಉಪ ಪ್ರಾಂಶುಪಾಲ ಚಂಗಪ್ಪ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ, ನಿವೃತ್ತ ಉಪನ್ಯಾಸಕ ವಸಂತ ಕುಮಾರ್, ವಿದ್ಯಾರ್ಥಿ ಪೋಷಕ ಪ್ರತಿನಿಧಿ ರಾಜೇಂದ್ರನ್, ಉಪನ್ಯಾಸಕರಾದ ಪೂರ್ಣಿಮಾ, ಪವಿತ್ರಾ, ಪ್ರಮೀಳಾ, ಶಾನ್ ನಾಣಯ್ಯ, ಸರ್ಫಾನ, ನೇತ್ರಾ, ಪಲ್ಲವಿ, ಸಬಿತಾ, ಗ್ರಂಥಪಾಲಕ ಸಿದ್ದಲಿಂಗ ಸ್ವಾಮಿ, ಸಿಬ್ಬಂದಿ ನಿಂಗಪ್ಪ ಓತಿಹಾಳ, ಮಾಲಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net