

ಅಕ್ಕಿಆಲೂರ: ಸೇವಾ ಮನೋಭಾವನೆ ಭಾರತದ ಚಿರಂತನ ಆದರ್ಶವಾಗಿದೆ. ನಿಸ್ವಾರ್ಥ ಸೇವೆ ವ್ಯಕ್ತಿಯನ್ನು ದೊಡ್ಡವನ್ನಾಗಿ ಮಾಡುತ್ತದೆ ಎಂದು ಪಟ್ಟಣದ ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಕಾರ್ಯದರ್ಶಿ ಎನ್.ಸಿ. ಪಾವಲಿ ಹೇಳಿದರು.
ಪಟ್ಟಣದ ಕಲಾ ಹಾಗೂ ಎಸ್.ಬಿ. ಜಾಬೀನ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಿಂದ ಸಮೀಪದ ಹಿರೂರ ಗ್ರಾಮದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಬಹುತೇಕ ಜನರು ಸೇವೆ ಮತ್ತು ತಾಗ್ಯದ ಮನೋಭಾವದಿಂದ ಸಾಮಾಜಿಕ ಕಳಕಳಿ ಹೊಂದಿದ್ದಾರೆ. ನಮ್ಮಲ್ಲಿನ ಅನೇಕ ಸಂಘ- ಸಂಸ್ಥೆಗಳಿಂದ ಮಾನವೀಯ ಕಾರ್ಯಗಳು ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ವಿನಯ ಬೆಳೆಯಬೇಕು. ಸಮುದಾಯದ ಮಧ್ಯೆ ಸಂಚರಿಸಿ ಕಷ್ಟ, ನಷ್ಟ ಕಂಡಾಗ ಮಾತ್ರ ಆತ್ಮವಿಶ್ವಾಸ ಮೂಡುತ್ತದೆ. ಇಂತಹ ಶಿಬಿರಗಳಿಂದ ಹಳ್ಳಿಗಳ ಸಂಸ್ಕೃತಿ ಅರಿಯಲು ಸಾಧ್ಯವಾಗುತ್ತದೆ ಎಂದರು.
ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಆರ್.ಸಿ. ಪಾಟೀಲ ಮಾತನಾಡಿ, ಹಳ್ಳಗಳಲ್ಲಿ ಜೀವನ ಹೇಗೆ ಕಟ್ಟಿಕೊಳ್ಳಬೇಕು ಎಂಬ ನೈತಿಕ ಶಿಕ್ಷಣ ದೊರೆಯುತ್ತದೆ. ವಿದ್ಯೆಯ ಜತೆಗೆ ವಿವೇಕದ ಸಹಬಾಳ್ವೆ ಕಲಿಸುವ ಗ್ರಾಮೀಣ ಪ್ರದೇಶದ ಜನಪದ ಜೀವನಶೈಲಿ ಅರಿತಾಗ ಮಾತ್ರ ನಾವು ಸಮಾಜಮುಖಿಯಾಗಲು ಸಾಧ್ಯ ಎಂದರು.
ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ನಿರ್ದೇಶಕ ಕುಮಾರ ಧಾರವಾಡ ಮಾತನಾಡಿದರು. ಸಮಾರಂಭದ ನಂತರ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ರಾಘವೇಂದ್ರ ಕ್ವಾಟೇರ, ಸಿದ್ದಲಿಂಗಪ್ಪ ಕೂಣನವರ, ಅಂಜನಗೌಡ ಪಾಟೀಲ, ಬಸವಂತಪ್ಪ ಮೆಳ್ಳಿಹಳ್ಳಿ, ಬಸವರಾಜ ಜಡೆಗೊಂಡರ, ನಿಂಗಪ್ಪ ಕ್ಷೌರದ, ಸೋಮಣ್ಣ ಜಡೆಗೊಂಡರ, ಉಮೇಶ ಬೆಲ್ಲದ, ಪ್ರಾಚಾರ್ಯ ಪಿ.ಎನ್. ಮ್ಯಾಗಳಗೇರಿ, ಎನ್‌ಎಸ್‌ಎಸ್ ಅಧಿಕಾರಿ ಸಿ.ಪಿ. ಗೊಲ್ಲರ, ಉಪನ್ಯಾಸಕರಾದ ಎನ್.ಬಿ. ಹುಣಸಿಹಳ್ಳಿ, ಆರ್.ಎಫ್. ತಳವಾರ, ಎಸ್.ಸಿ. ರಾಮನಗೌಡ, ಎಸ್.ಎಸ್. ಕಡಕೊಳ, ಅನಿಲಕುಮಾರ ಗೌಡ, ಪೂಜಾ ಜಡೇಗೊಂಡರ, ಪ್ರತಿಕ್ಷಾ ಕಬ್ಬೂರ, ಪ್ರಮೋದ ಚಿಕ್ಕಣ್ಣನವರ, ಪ್ರಭು ನಿಂಬಕ್ಕನವರ, ಜಗದೀಶ ಜವಳಿ ಉಪಸ್ಥಿತರಿದ್ದರು.