

ಬದಿಯಡ್ಕ: ಅಹಂಕಾರವೆಂಬ ಪರ್ವತದ ತುತ್ತ ತುದಿಯನ್ನೇರಿದ ಪ್ರತಿಯೊಬ್ಬನೂ ಒಂದಲ್ಲ ಒಂದು ದಾರಿಯಲ್ಲಿ ಕೆಳಗೆ ಬೀಳುವುದಂತೂ ನಿಶ್ಚಿತ. ವಿದ್ಯಾರ್ಥಿಗಳು ಜೀವನದಲ್ಲಿ ವಿನಮ್ರ ಭಾವ ಅಳವಡಿಸಿಕೊಳ್ಳಬೇಕು. ಅಹಂಕಾರ ತೊರೆದಾಗ ಉತ್ತಮ ವ್ಯಕ್ತಿಯಾಗುತ್ತಾನೆ ಎಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ರಾಜೇಂದ್ರ ಬಜಕೂಡ್ಲು ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಂಗಳವಾರ ಜರುಗಿದ ಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಕಲಾ ಶಿಕ್ಷಕ ಪರಮೇಶ್ವರ ಹೆಬ್ಬಾರ್,ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ, ಶಾಲಾ ಖಜಾಂಚಿ ರಾಜಗೋಪಾಲ ಚುಳ್ಳಿಕ್ಕಾನ ಮಾತನಾಡಿದರು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದರು. 10ನೇ ತರಗತಿ ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆ, ಅನಿಸಿಕೆ ಹಂಚಿಕೊಂಡರು.
10ನೇ ತರಗತಿ ವಿದ್ಯಾರ್ಥಿಗಳ ಪಾಲಕರು ಭಾಗವಹಿಸಿದ್ದು, ಕೃಷ್ಣ ಪ್ರಕಾಶ್ ಬಳ್ಳಂಬೆಟ್ಟು, ವೇಣುಗೋಪಾಲ್ ಪೆರ್ಲ, ತ್ರಿಪುರ ಸಂಯುಕ್ತಾ ಕುಂಜತ್ತೋಡಿ, ಶಾರದಾ ಮುಂಡೋಳುಮೂಲೆ ಅಭಿಪ್ರಾಯ ತಿಳಿಸಿದರು. ರಶ್ಮಿ ಪೆರ್ಮುಖ, ಸರೋಜಾ ಕಾನತ್ತಿಲ, ಶಾಂತಿ ವಿ ಆಚಾರ್ಯ ಆಶೀರ್ವದಿಸಿದರು. 9ನೇ ತರಗತಿ ವಿದ್ಯಾರ್ಥಿಗಳು ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು. ವಿದ್ಯಾರ್ಥಿಗಳಾದ ಚಿನ್ಮಯ ರಾಮಣ್ಣ ರೈ ಸ್ವಾಗತಿಸಿದರು. ಖುಷಿ ರೈ ವಂದಿಸಿದರು. ಸಮನ್ವಿ, ಸಂಜನಾ ಕಾರ್ಯಕ್ರಮ ನಿರೂಪಿಸಿದರು.