ವಿದ್ಯಾರ್ಥಿಗಳಲ್ಲಿ ಆವಿಷ್ಕಾರದ ಮನೋಭಾವವಿರಲಿ: ಪ್ರೊ.ಸಿ.ಎಂ.ತ್ಯಾಗರಾಜ

13Anand6
ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉನ್ನತ ವ್ಯಾಸಂಗದ ಕುರಿತು ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಪ್ರೊ.ಸಿ.ಎಂ ತ್ಯಾಗರಾಜ ಮಾತನಾಡಿದರು. ಡಾ.ಅರ್ಜುನ ಜಂಬಗಿ, ಪ್ರೊ.ವಿನಾಯಕ ಬಂಕಾಪುರ, ಪ್ರೊ.ಬಸವರಾಜ ಪದ್ಮಶಾಲಿ, ಡಾ.ವಿವೇಕ ರೆಡ್ಡಿ ಇತರರಿದ್ದರು.
Published on

ಬೆಳಗಾವಿ: ವಿಜ್ಞಾನಕ್ಕೆ ಅಪಾರ ಬೇಡಿಕೆ ಇದೆ. ವಿದ್ಯಾರ್ಥಿಗಳಲ್ಲಿ ಆವಿಷ್ಕಾರದ ಮನೋಭಾವವಿರಬೇಕು ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಹಮ್ಮಿಕೊಂಡಿದ್ದ ರಾಚವಿ ವ್ಯಾಪ್ತಿಯಲ್ಲಿನ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉನ್ನತ ವ್ಯಾಸಂಗದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಶಿಣ ಸಂಸ್ಥೆಗಳು ವಿಜ್ಞಾನ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ವಿಜ್ಞಾನ ಲೋಕದ ಸಾಧಕರು ಮಾಡಿದ ಆವಿಷ್ಕಾರದ ರಥವನ್ನು ವಿದ್ಯಾರ್ಥಿಗಳು ಮುನ್ನಡೆಸಬೇಕು ಎಂದು ಕರೆ ನೀಡಿದರು.

ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ಅರ್ಜುನ ಜಂಬಗಿ ಅಧ್ಯತೆ ವಹಿಸಿದ್ದರು. ಪ್ರೊ.ವಿನಾಯಕ ಬಂಕಾಪುರ, ಪ್ರೊ.ಬಸವರಾಜ ಪದ್ಮಶಾಲಿ, ಡಾ.ವಿವೇಕ ರೆಡ್ಡಿ, ಡಾ.ಡೇವಿಡ್​ ಕಾರ್ಯಾಗಾರದ ಸಂಯೋಜಕಿ ಪ್ರೊ. ವಿಜಯಲಕ್ಷಿ$್ಮ ಶೀಗಿಹಳ್ಳಿ, ಪ್ರೊ.ಪರಶುರಾಮ ಬನ್ನಿಗಿಡದ, ವಿದ್ಯಾಸಾಗರ ಮೆಸೂರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net