ವಿದ್ಯಾರ್ಥಿಗಳು ಸಂಶೋಧನಾ ಕೌಶಲ್ಯ ವೃದ್ಧಿಸಿಗೊಳ್ಳಬೇಕು

24-02-Shiva-1
ರಾಯಚೂರಿನ ಎಚ್‌ಕೆಇಎಸ್ ಸಂಸ್ಥೆಯ ಶ್ರೀ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಐಸಿಐಸಿಎಸಿಎಸ್-2024 ಸಮ್ಮೇಳನವನ್ನು ಬೆಂಗಳೂರಿನ ಐಐಎಸ್‌ಸಿ ಪ್ರಾಧ್ಯಾಪಕ ಡಾ.ಟಿ.ಶ್ರೀನಿವಾಸ ಉದ್ಘಾಟಿಸಿದರು. ಥಾಲಿಸ್ಟ್ ಇನ್ನೋವೇಷನ್ ಸಂಸ್ಥೆಯ ಸಿಇಒ ಡಾ.ಪ್ರದೀಪ್ ದೇಸಾಯಿ, ಐಇಇಇ ಉತ್ತರ ಕರ್ನಾಟಕ ಅಧ್ಯಕ್ಷ ಪ್ರೊ.ರವಿ ಹೊಸಮನಿ, ತಿರುಪತಿಯ ಐಐಟಿ ಪ್ರಾಧ್ಯಾಪಕ ಡಾ.ಚಲವಾದಿ ವಿಷ್ಣು, ಕಾಲೇಜಿನ ಇ ಅಂಡ್ ಸಿಇ ವಿಭಾಗದ ಮುಖ್ಯಸ್ಥ ಡಾ.ಪಿ.ವಿಶ್ವನಾಥ, ಪ್ರಾಧ್ಯಾಪಕರಾದ ಪ್ರೊ.ಸ್ಮೀತಾ ಚೆಟ್ಟಿ, ಪ್ರೊ.ರಾಚಮ್ಮ ಪಾಟೀಲ್ ಇದ್ದರು.
Published on

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಂಶೋಧನಾ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಜೀವನದಲ್ಲಿ ಉನ್ನತ ಸಾಧನೆಗೈಯಲು ಪ್ರಯತ್ನಿಸಬೇಕು ಎಂದು ಬೆಂಗಳೂರಿನ ಐಐಎಸ್‌ಸಿ ಪ್ರಾಧ್ಯಾಪಕ ಡಾ.ಟಿ.ಶ್ರೀನಿವಾಸ ಹೇಳಿದರು.
ಸ್ಥಳೀಯ ಎಚ್‌ಕೆಇಎಸ್ ಸಂಸ್ಥೆಯ ಶ್ರೀ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಐಸಿಐಸಿಎಸಿಎಸ್-2024 ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಇಂತಹ ಸಮ್ಮೇಳನಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುವುದರ ಜತೆಗೆ ಸಂಶೋಧನಾ ಕೌಶಲ್ಯವೂ ವೃದ್ಧಿಗೊಳಲಿದೆ ಎಂದರು.
ಥಾಲಿಸ್ಟ್ ಇನ್ನೋವೇಷನ್ ಸಂಸ್ಥೆಯ ಸಿಇಒ ಡಾ.ಪ್ರದೀಪ್ ದೇಸಾಯಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಇ ಅಂಡ್ ಸಿಇ ವಿಭಾಗದ ಮುಖ್ಯಸ್ಥ ಡಾ.ಪಿ.ವಿಶ್ವನಾಥ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಮ್ಮೇಳನದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.
ಐಇಇಇ ಉತ್ತರ ಕರ್ನಾಟಕ ಅಧ್ಯಕ್ಷ ಪ್ರೊ.ರವಿ ಹೊಸಮನಿ, ತಿರುಪತಿಯ ಐಐಟಿ ಪ್ರಾಧ್ಯಾಪಕ ಡಾ.ಚಲವಾದಿ ವಿಷ್ಣು ವಿಷಯ ಮಂಡನೆ ಮಾಡಿದರು. ಎಚ್‌ಕೆಇಎಸ್ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಕಾಲೇಜು ಸಂಚಾಲಕ ಎನ್.ಗಿರಿಜಾಶಂಖರ, ಪ್ರಾಚಾರ್ಯ ಡಾ.ಆರ್.ಬಸವರಾಜ, ಪ್ರಾಧ್ಯಾಪಕರಾದ ಪ್ರೊ.ಸ್ಮೀತಾ ಚೆಟ್ಟಿ, ಪ್ರೊ.ರಾಚಮ್ಮ ಪಾಟೀಲ್, ಪ್ರೊ.ಸುಮಂಗಲ ಇಟಗಿ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net