ವಿದ್ಯಾರ್ಥಿಗಳು ಉತ್ತಮ ಹವ್ಯಾಸ ಬೆಳೆಸಿಕೊಂಡು ಸಾಧನೆ ತೋರಬೇಕು : ಡಾ. ವಿರೇಂದ್ರ ಹೆಗ್ಗಡೆ

sdm
Published on

ಮೈಸೂರು: ವಿದ್ಯಾರ್ಥಿಗಳು ಯಾವುದಾದರು ಒಂದು ಹವ್ಯಾಸವನ್ನು ಬೆಳೆಸಿಕೊಂಡು ಅದರಲ್ಲಿ ಮುಂದುವರೆಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಪ್ರಭಿಗ್ಯಾನ್’ ಅಂತರ ಕಾಲೇಜು ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನೃತ್ಯ, ಚಿತ್ರಕಲೆ, ಸಂಗೀತ ಸೇರಿದಂತೆ ಯಾವುದಾದರು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ಕ್ಷೇತ್ರದಲ್ಲಿ ಸಾಧನೆ ತೋರಲು ಶ್ರಮಿಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವಿದ್ಯಾರ್ಥಿ ಜೀವನದಲ್ಲಿ ಎಲ್ಲವನ್ನು ಕಲಿಯಬಹುದು. ವಯಸ್ಸಾದಂತೆ ಕಲಿಕೆಯು ಸಾಮರ್ಥ್ಯ ಕಡಿಮೆ ಆಗುತ್ತದೆ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಎಲ್ಲ ವಿಷಯಗಳ ಕಡೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿ ಕಲಿಯಬೇಕು. ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ಸಮಯ ಇಲ್ಲ ಎಂಬ ನೆಪ ಬೇಡ. ಸಮಯ ಇಲ್ಲ ಎಂಬುದು ಸುಳ್ಳು. ಕುತೂಹಲ, ಆಸಕ್ತಿ ಇದ್ದರೆ ಸಮಯ ತಾನಾಗಿಯೇ ಹೊಂದಿಸಿಕೊಳ್ಳಬಹುದು ಎಂದರು.

ವೇದಿಕೆಯಲ್ಲಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ನಯನ ಕುಮಾರಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಜ್ಯೋತಿಲಕ್ಷ್ಮೀ ಜಿ. ಕಾವ, ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷ ಯು.ಆರ್. ರಿಯ, ಕಾರ್ಯದರ್ಶಿ ಸಾನ್ವಿ ಗೌರಮ್ಮ, ಸಾಂಸ್ಕೃತಿಕ ಕಾರ್ಯದರ್ಶಿ ಎಸ್. ಅನುಷಾ, ಸಾಹಿತ್ಯ ಕಾರ್ಯದರ್ಶಿ ಬಿಬಿ ಫಾತಿಮಾ ಫರ್ಜೀನ್, ಉಪಾಧ್ಯಕ್ಷೆ ತಶ್ವಿ ಗಂಗಮ್ಮ, ಜಂಟಿ ಕಾರ್ಯದರ್ಶಿಗಳಾದ ಆರ್. ಲಕ್ಷ್ಮೀ, ಎಚ್.ಎಸ್. ಸುಶ್ಮಿತಾ, ಕ್ರೀಡಾ ಕಾರ್ಯದರ್ಶಿ ಪಿ. ಸಂಜನಾ, ಸಾಂಸ್ಕೃತಿಕ ಸಂಯೋಜಕ ಡಾ.ವಿನೋದ, ಸಾಹಿತ್ಯ ಸಂಯೋಜಕ ಹಜ್ರಾ ಬೇಂಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net