ವಿದ್ಯಾರ್ಥಿಗಳು ವಿಜಯದ ಜಪ ಮಾಡುತ್ತಿರಬೇಕು

Students should chant victory
ಮಹಾಲಿಂಗಪುರದ ಕೆಎಲ್‌ಇ ಪದವಿ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಬಾಗಲಕೋಟ ವಿವಿ ಉಪಕುಲಪತಿ ಪ್ರೋ.ಆನಂದ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು.ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ,ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ ಇದ್ದರು.
Published on

ಮಹಾಲಿಂಗಪುರ: ಬದುಕಿಗೊಂದು ಗುರಿ ಇರಬೇಕು, ಗುರಿ ತಲುಪಲು ಅಗತ್ಯ ಪರ್ಯಾಯ ಮಾರ್ಗಗಳ ಅರಿವು ಇರಬೇಕು. ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಬಾಗಲಕೋಟ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ.ಆನಂದ ದೇಶಪಾಂಡೆ ಹೇಳಿದರು.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನಲ್ಲಿ ಮಂಗಳವಾರ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಯಾವಾಗಲೂ ಸಾಧನೆಯ ತಪ ಮತ್ತು ವಿಜಯದ ಜಪ ಮಾಡುತ್ತಿರಬೇಕು ಎಂದರು.

ಸ್ಥಳೀಯ ಠಾಣಾಕಾರಿ ಕಿರಣ ಸತ್ತಿಗೇರಿ ಮಾತನಾಡಿ, ಯುವಜನಾಂಗ ದೇಶದ ಆಸ್ತಿ ಇದ್ದಂತೆ ವಾಹನ ಸವಾರಿ ಮಾಡುವಾಗ ಸುರಕ್ಷತಾ ನಿಯಮ ಪಾಲಿಸಬೇಕು. ದುಶ್ಚಟಗಳ ದಾಸರಾಗಬಾರದು. ಆರೋಗ್ಯವಂತ ನಾಗರಿಕರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು, ಕಳೆದ ಸಾಲಿನ ರ‌್ಯಾಂಕ್ ವಿದ್ಯಾರ್ಥಿಗಳನ್ನು, ಸಾಂಸ್ಕೃತಿಕ, ಕ್ರೀಡೆ ಹಾಗೂ ನಾನಾ ವಿಭಾಗಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಹಾಡು, ನತ್ಯ ಸೇರಿದಂತೆ ಸಾಂಸ್ಕೃತಿಕ ಕಲೆ ಪ್ರದರ್ಶಿಸಿದರು. ಡಾ.ಅಶೋಕ ನರೋಡೆ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ ಅಧ್ಯಕ್ಷತೆ ವಹಿಸಿದ್ದರು. ಸಿಬ್ಬಂದಿ ಕಾರ್ಯದರ್ಶಿ ಅಭಯ್ ಉಗಾರೆ ವರದಿ ವಾಚನ ಮಾಡಿದರು.

ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ, ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಐಕ್ಯುಎಸಿ ಸಂಯೋಜಕಿ ಡಾ.ಎಸ್.ಡಿ.ಸೋರಗಾಂವಿ, ಪಿಯು ಪ್ರಾಚಾರ್ಯ ಎಲ್.ಬಿ.ತುಪ್ಪದ, ವಿದ್ಯಾರ್ಥಿಗಳ ಪ್ರಧಾನ ಕಾರ್ಯದರ್ಶಿ ಕೀರ್ತಿ ಬಂದಿ, ಎಸ್.ಟಿ.ದಿವಾನಜಿ, ಎಸ್.ಎಸ್.ಮುಗಳ್ಯಾಳ, ಆರ್.ಎಸ್.ಕಲ್ಲೋಳ್ಳಿ, ಪಿ.ಎಸ್.ಹಿಪ್ಪರಗಿ, ವ್ಹಿ.ಎ.ಅಡಹಳ್ಳಿ, ಸಿ.ಎಂ.ಐಗಳಿ, ಟಿ.ಡಿ.ಡಂಗಿ, ಆರ್.ಎಸ್.ಪೂಜಾರಿ, ಎನ್.ಬಿ.ಹೊಸಪೇಟಿ, ಜೆ.ಆರ್.ಪಾಟೀಲ, ಪಿ.ಎಂ.ಗೌಳಿ, ಐ.ಸಿ.ಶಿರೋಳ, ನಂದಿನಿ ಗಸ್ತಿ, ಸುಪ್ರೀತಾ ವಜ್ಜರಮಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net