ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು

1KATAKOL2
Published on

ಕಟಕೋಳ: ವಿದ್ಯಾರ್ಥಿಗಳು ಶಿಣದ ಜತೆಗೆ ಸಂಸ್ಕಾರವಂತರಾಗಬೇಕು, ಸಂಸ್ಕಾರವಿಲ್ಲದಿದ್ದರೆ ಶಿಣಕ್ಕೆ ಬೆಲೆ ಇರುವುದಿಲ್ಲ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಮೀಪದ ಚಂದರಗಿಯ ಎಸ್​.ಎಂ.ಕಲೂತಿ ಕ್ರೀಡಾಶಾಲೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಚಂದರಗಿ ಶಾಲೆ ರಾಜ್ಯದಲ್ಲಿಯೇ ಹೆಸರುವಾಸಿ ಸಂಸ್ಥೆಯಾಗಿದೆ. ಇಲ್ಲಿ ವ್ಯಾಸಂಗ ಮಾಡಿದವರು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ ಎಂದರು.

ಕ್ರೀಡಾ ವಸತಿ ಶಾಲೆಯ ಸಂಸ್ಥಾಪಕ ಎಸ್​.ಎಂ.ಕಲೂತಿ, ನಿರ್ದೇಶಕ ಎಸ್​.ಆರ್​.ನವರಕ್ಕಿ, ಎಸ್​.ಜಿ.ದೇಸಾಯಿ, ಬಿ.ಎಂ.ಬೆಳಗಲಿ, ಎಸ್​.ಎನ್​.ಅಡಗಿಮನಿ, ಎಂ.ಎಚ್​.ಹೊನ್ನನಾಯ್ಕನವರ, ರಾಮದುರ್ಗ ತಹಸೀಲ್ದಾರ ಆಕಾಶ ಹೊಳೆಪ್ಪಗೋಳ, ಎ.ಎನ್​.ಮೋದಗಿ, ಆರ್​.ಕೆ.ಪಡತಾರೆ, ಮರನೂರ ಇತರರಿದ್ದರು.

ವ್ಯವಸ್ಥಾಪಕ ಜೆ.ಬಿ.ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸತೀಶ ಪಾಟೀಲ ಸ್ವಾಗತಿಸಿದರು, ಐ.ಎಸ್​.ಸೂಳಿಭಾವಿ ವಂದಿಸಿದರು, ಆರ್​.ಕೆ.ಗೌಡರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net