ವಿದ್ಯಾರ್ಥಿಗಳು ಕೌಶಲ ಅಳವಡಿಸಿಕೊಳ್ಳಬೇಕು

4Athani1
Published on

Students should apply the skills,ಅಥಣಿ: ವಿದ್ಯಾರ್ಥಿಗಳು ಪುನಶ್ಚೇತನ ಕಾರ್ಯಕ್ರಮದ ಸದುಪಯೋಗ ಪಡೆದು ಸಾಧನೆ ಮಾಡಬೇಕು ಎಂದು ಪ್ರಾಚಾರ್ಯ ಡಾ.ಪ್ರಶಾಂತ ಮಗದುಮ್ಮ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಬಿಎ, ಬಿಎಸ್ಸಿ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ವಲಯದಲ್ಲಿ ಇಂದು ಸಾಕಷ್ಟು ಅವಕಾಶಗಳಿದ್ದು, ಅದಕ್ಕೆ ಬೇಕಾದ ಕೌಶಲ ಅಳವಡಿಸಿಕೊಳ್ಳಬೇಕು ಎಂದರು.

ಕಾಲೇಜು ಯೂನಿಯನ್ ಚೇರ್ಮನ್ ಡಾ.ಭಾರತಿ ಗದ್ದಿ ಮಾತನಾಡಿದರು. ಸಂಯೋಜಕರಾದ ಡಾ. ಜಯಣ್ಣ.ಎನ್.ಡಿ., ಐ.ಜಿ.ಮುಲ್ಲಾ, ಡಾ.ಡಿ. ವಾದಿರಾಜ ಮಾತನಾಡಿದರು. ಡಾ. ಜಯಣ್ಣ ಎನ್.ಡಿ. ಸ್ವಾಗತಿಸಿದರು. ಕೆ.ಎಂ.ಅಚ್ಯುತಾನಂದ ವಂದಿಸಿದರು. ಎಸ್.ಸಿ.ನೀರಲಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net