ವಿದ್ಯಾರ್ಥಿಗಳಿಗೆ ಉನ್ನತ ಗುರಿ ಇರಬೇಕು

IMG20240821221638.jpg
Published on

ಬೆಳಗಾವಿ: ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿರಬೇಕು ಹಾಗೂ ಗುರಿ ಮುಟ್ಟುವವರೆಗೂ ಪ್ರಯತ್ನ ನಿಲ್ಲಿಸಬಾರದು ಎಂದು ರಾಷ್ಟ್ರಮಟ್ಟದ ಅಂಗವಿಕಲ ಕ್ರೀಡಾಪಟು ರಾಘವೇಂದ್ರ ಅನ್ವೇಕರ್ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವಿರಬೇಕು. ತಮ್ಮನ್ನು ತಾವು ಪ್ರೀತಿಸಬೇಕು. ಪರಿಶ್ರಮ, ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯವು ಎಲ್ಲ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.

ಸಾರಿಕಾ ನಗರೆ ವಾರ್ಷಿಕ ವರದಿ ವಾಚಿಸಿದರು. ಎನ್‌ಸಿಸಿಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಪ್ರೀತಿ ಸವದಿ, ಗುರುನಾಥ ರಾಜೋಳಿ ಮತ್ತು ಆಕಾಶ ಗುಡಗೆನಟ್ಟಿ ಅವರನ್ನು ಸನ್ಮಾನಿಸಲಾಯಿತು. ಚಾರ್ಟೆಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಮೀಕ್ಷಾ ದೇಸಾಯಿ ಮತ್ತು ವರುಣ ಪೋರವಾಲ್ ಅವರನ್ನು ಸನ್ಮಾನಿಸಲಾಯಿತು.

2023-2024ನೇ ಸಾಲಿನ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಅತ್ಯುತ್ತಮ ಘಟಕ ಪ್ರಶಸ್ತಿ ಪಡೆದ ಎನ್‌ಸಿಸಿ ಘಟಕದ ತರಬೇತುದಾರ ಮೇಜರ್ ಡಾ.ಮಹೇಶ ಗುರನಗೌಡರ ಅವರನ್ನು ಸನ್ಮಾನಿಸಲಾಯಿತು. ಬಿಎ ವಿಭಾಗದ ಆದರ್ಶ ವಿದ್ಯಾರ್ಥಿಗಳಾಗಿ ಬಾಳೇಶ ಶಿರಣ್ಣವರ ಹಾಗೂ ಪೂಜಾ ತಳವಾರ, ಬಿಕಾಂ ವಿಭಾಗದಲ್ಲಿ ಹರ್ಷ ಶಿರೋಳಕರ್ ಮತ್ತು ಆಂಡ್ರಿಯಾ ಪೌಲ್ ಅವರನ್ನು ಗೌರವಿಸಲಾಯಿತು.

ಹಿರಿಯ ಪ್ರಾಧ್ಯಾಪಕ ಡಾ.ಜಿ.ಎನ್.ಶೀಲಿ, ಡಾ.ಎಚ್.ಎಂ.ಚನ್ನಪ್ಪಗೋಳ, ಡಾ.ರಾಘವೇಂದ್ರ ಹಜಗೋಳಕರ, ಲಕ್ಷ್ಮೀ ಶಿವಣ್ಣವರ, ಡಾ.ರೀಚಾ ರಾವ ಇದ್ದರು. ತ್ರಿಷಾ ಪ್ರಾರ್ಥಿಸಿದರು. ವಿನಾಯಕ ವರುಟೆ ಸ್ವಾಗತಿಸಿದರು. ನಂದನ ಕಟಾಂಬಳೆ ಪರಿಚಯಿಸಿದರು. ಚನ್ನಬಸನಗೌಡ ಪಾಟೀಲ ನಿರೂಪಿಸಿದರು. ನಿಖಿತಾ ಬಿದ್ರೆ ಮತ್ತು ಸಿದ್ಧನಗೌಡ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net