

ಮಂಡ್ಯ: ಪ್ರಸಕ್ತ ಸಾಲಿನ ಕ್ರೀಡಾ ವಸತಿ ಶಾಲೆ/ಕ್ರೀಡಾ ನಿಲಯದ 5ನೇ ತರಗತಿ ಪ್ರವೇಶಕ್ಕೆ ಜ.13ರಿಂದ 21ರವರೆಗೆ ಅಭ್ಯರ್ಥಿ ಆಯ್ಕೆಗಳನ್ನು ತಾಲೂಕುವಾರು ಮಾಡಿಕೊಳ್ಳಲಾಗುತ್ತಿದೆ.
ಅದರಂತೆ ಜ.13ರಂದು ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ, 16ರಂದು ನಾಗಮಂಗಲ ತಾಲೂಕು ಕ್ರೀಡಾಂಗಣ, 17ರಂದು ಪಾಂಡವಪುರದ ಪಾಂಡವ ಕ್ರೀಡಾಂಗಣ, 18ರಂದು ಶ್ರೀರಂಗಪಟ್ಟಣ ತಾಲೂಕು ಕ್ರೀಡಾಂಗಣ, 19ರಂದು ಮಳವಳ್ಳಿ ತಾಲೂಕು ಕ್ರೀಡಾಂಗಣ, 20ರಂದು ಮದ್ದೂರು ತಾಲೂಕು ಕ್ರೀಡಾಂಗಣ ಹಾಗೂ 24ರಂದು ಕೆ.ಆರ್.ಪೇಟೆ ತಾಲೂಕು ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಿಗದಿತ ದಿನದಂದು ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಲಿದ್ದು, ಅಥ್ಲೆಟಿಕ್ಸ್ ಮತ್ತು ಬ್ಯಾಸ್ಕೆಟ್‌ಬಾಲ್, ಫುಟ್ಬಾಲ್(ಬಾಲಕರಿಗೆ ಮಾತ್ರ), ಕಬಡ್ಡಿ ಕ್ರೀಡೆ ಮೂಲಕ ಆಯ್ಕೆ ಮಾಡಲಾಗುವುದು.
ಜಿಲ್ಲಾಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಆನಂತರ ತಿಳಿಸಲಾಗುವುದು. ಮಾಹಿತಿಗೆ ಮೊ.ಸಂ 9740896699, 9916644007 ಮತ್ತು 7353097540 ಯನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.