ಕೃಷಿ ಆಸಕ್ತಿ ಮೂಡಿಸಲು ಪ್ರಾಯೋಗಿಕ ಪಾಠ

byn (2)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಶಾಲೆಗಳಲ್ಲಿ ಸಾವಾನ್ಯವಾಗಿ ಆಟ, ಪಾಠದ ಜತೆಗೆ ಕೆಲ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾವಾನ್ಯ. ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿರುವ ಕೃಷಿ ಆಸಕ್ತಿ ಮತ್ತೆ ಮೂಡಿಸಬೇಕು, ತರಗತಿಯಲ್ಲಿ ಕೃಷಿ ಪಾಠ ವಾಡುವುದಕ್ಕಿಂತ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಸಂಪೂರ್ಣ ವಾಹಿತಿ ಮನದಟ್ಟು ವಾಡಲು ಸಾಧ್ಯ ಎಂಬ ಆಶಯದೊಂದಿಗೆ ಶಿರೂರು ಜ್ಞಾನದ ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತದ ನಾಟಿ ವಾಡುವ ಮೂಲಕ ಕೃಷಿ ಶಿಕ್ಷಣದ ಮಾಹಿತಿ ನೀಡಲಾಯಿತು.

ನಾಗಿನಗದ್ದೆಯ ಪ್ರಗತಿಪರ ಕೃಷಿಕ ನಾಗೇಶ ಮೇಸ್ತ ತಮ್ಮ ಕೃಷಿ ಭೂಮಿಯಲ್ಲಿ ನಾಟಿ ವಾಡಲು ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ವಾಹಿತಿ ನೀಡಿದರು. ಸ್ಥಳೀಯರ ಸಹಕಾರದಲ್ಲಿ ಗದ್ದೆಯಲ್ಲಿ ಭತ್ತದ ನಾಟಿ ವಾಡುವ ಮೂಲಕ ಮಕ್ಕಳಿಗೆ ಕೃಷಿ ಶಿಕ್ಷಣ ನೀಡಲಾಯಿತು. ಪ್ರಾಂಶುಪಾಲ ಡಾ.ರವಿದಾಸ್ ಶೆಟ್ಟಿ ಸಸಿ ನಾಟಿ ವಾಡುವ ಮೂಲಕ ನಾಟಿಗೆ ಚಾಲನೆ ನೀಡಿದರು. ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

ಮಳೆಯಲ್ಲೂ ಬತ್ತದ ಉತ್ಸಾಹ

ಮಕ್ಕಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಪಾಠ ವಾಡಿದ್ದು, ಉಳಿದವರಿಗೆ ವಾದರಿಯಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ ಮಕ್ಕಳಿಗೆ ಗದ್ದೆ ಎಂದರೆ ಏನು, ಬೇಸಾಯ, ನಾಟಿ ಕಾರ್ಯ ಹೇಗೆ ವಾಡಬೇಕು ಎಂಬ ಮಾಹಿತಿ ನೀಡುತ್ತಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು. ಮಕ್ಕಳು ಮಳೆಯನ್ನೂ ಲೆಕ್ಕಿಸದೇ ಉತ್ಸಾಹದಿಂದ ಪಾಲ್ಗೊಂಡರು.

ತರಗತಿಯಲ್ಲಿ ಕೃಷಿ ಬಗ್ಗೆ ಪಾಠ ಮಾಡುವ ಶಿಕ್ಷಕರು, ವಿದ್ಯಾರ್ಥಿಗಳನ್ನು ನೇರವಾಗಿ ಗದ್ದೆಗೆ ಕರೆದುಕೊಂಡು ಭತ್ತ ನಾಟಿಯ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ರೈತರ ಪರಿಶ್ರಮವನ್ನು ಅರಿತ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು. ಹಲವು ಪ್ರಶ್ನೆಗಳನ್ನು ಕೇಳಿ ಅನುವಾನಗಳನ್ನು ಬಗೆಹರಿಸಿಕೊಂಡರು. ಮಕ್ಕಳಿಗೆ ರೈತರ ಕಷ್ಟ ಅರಿವಿಗೆ ಬಂದಿದೆ. -ನಾಗೇಶ ಮೇಸ್ತ, ಪ್ರಗತಿಪರ ಕೃಷಿಕ. https://www.vijayavani.net/aghoreshwar-melody-group-anniversary https://www.vijayavani.net/green-life-campaign-in-kota

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net