

ಕುರುಗೋಡು: ತಾಲೂಕಿನ ಕಲ್ಲುಕಂಬ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಬಿಇಒ ಸಿದ್ದಲಿಂಗಮೂರ್ತಿ ಶುಕ್ರವಾರ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿದರು.
ಇದನ್ನೂ ಓದಿ:ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕೊಠಡಿ ನಿರ್ಮಾಣ
ಹತ್ತನೇಯ ತರಗತಿ ಕೊಠಡಿಗೆ ತೆರಳಿ ಇಂಗ್ಲಿಷ್ ಪದ್ಯ ಹೇಳುವಂತೆ ವಿದ್ಯಾರ್ಥಿಗಳಿಗೆ ಕೇಳಿದಾಗ ಕೆಲವರು ಮಾತ್ರ ಓದಿದರು. ವಿಜ್ಞಾನದ ಪ್ರಶ್ನೆಗೆ ಮಕ್ಕಳು ಮೌನಕ್ಕೆ ಶರಣಾದರು. ಇದನ್ನು ಗಮನಿಸಿ ಮಕ್ಕಳು ಹೀಗಿದ್ದರೆ ಅರ್ಧ ವಾರ್ಷಿಕ ಪರೀಕ್ಷೆ ಹೇಗೆ ಬರೆಯುತ್ತಾರೆ. ಶಿಕ್ಷಕರು ಸರಿಯಾಗಿ ಪಾಠ ಮಾಡದಿದ್ದರೆ ಹೇಗೆ ಎಂದು ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳು ಶಾಲೆಯ ವ್ಯವಸ್ಥೆ, ಶಿಕ್ಷಕರ ಮೇಲೆ ದೂರುಗಳಿದ್ದರೆ ಮುಕ್ತವಾಗಿ ತಿಳಿಸಿದರೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು. ತರಾತುರಿಯಲ್ಲಿ ಪಾಠ ಮುಗಿಸದೇ ಮಕ್ಕಳಿಗೆ ಅರ್ಥವಾಗುವಂತೆ ಬೋಧಿಸುವುದು ಶಿಕ್ಷಕರ ಜವಾಬ್ದಾರಿ ಎಂದರು.