

ಮೈಸೂರು: ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ಎಐಡಿಎಸ್‌ಒ ವತಿಯಿಂದ ರಾಮಸ್ವಾಮಿ ವೃತದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಂಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಸರ್ಕಾರದಿಂದ ದೊರೆಂುುವ ವಿದ್ಯಾರ್ಥಿವೇತನದ ಮೇಲೆ ಅವಲಂಬಿತರಾಗಿಂೆುೀ ಪದವಿ ಹಾಗೂ ಉನ್ನತ ಶಿಕ್ಷಣ ಪ್ರವೇಶಿಸುವ ಸಾಹಸಕ್ಕೆ ಮುಂದಾಗುತ್ತಾರೆ, ಇಲ್ಲವಾದಲ್ಲಿ ಶಿಕ್ಷಣ ತೊರೆಂುುತ್ತಾರೆ. ಶಿಕ್ಷಣದ ವ್ಯಾಪಾರೀಕರಣ ಈಗಾಗಲೇ ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸುಗಳನ್ನು ಸೀಮಿತಗೊಳಿಸುತ್ತಿವೆ. ಹೀಗಿರುವಾಗ ವಿದ್ಯಾರ್ಥಿ ವೇತನ ಕಡಿತಗೊಳಿಸುತ್ತಿರುವುದು ಕಡು ಶಿಕ್ಷಣ ವಿರೋಧಿ ಹಾಗೂ ವಿದ್ಯಾರ್ಥಿ ವಿರೋಧಿ ನಡೆಂಾಗಿದೆ. ತಾನು ಬಡಜನರ ಪರ ಎಂದು ಹೇಳಿಕೊಳ್ಳುವ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತಗೊಳಿಸಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದರು.
ಪದವಿ, ಸ್ನಾತಕೋತ್ತರ ಇಂಜಿನಿಂುರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆತಿಲ್ಲ. ಸದ್ಯದ ಪರಿಸ್ಥಿತಿಂುಲ್ಲಿ 2022ರಲ್ಲಿ ಶೇ.40 ವಿದ್ಯಾರ್ಥಿಗಳಿಗೆ, 2023ರಲ್ಲಿ ಶೇ.65 ವಿದ್ಯಾರ್ಥಿಗಳಿಗೆ, 2024ರಲ್ಲಿ ಶೇಕಡ.95ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಂದಿಲ್ಲ. ರಾಜ್ಯದಲ್ಲಿ ಒಟ್ಟು 4,90,372 ವಿದ್ಯಾರ್ಥಿಗಳಿಗೆ, ಮೈಸೂರು ಜಿಲ್ಲೆಂು 37,482 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಂದಿಲ್ಲ. ಜನರ ತೆರಿಗೆಂುನ್ನು ಶಿಕ್ಷಣಕ್ಕೆ ಆದ್ಯತೆ ನೀಡಿ ವಿನಿಂೋಗಿಸದೆ ವಂಚಿಸಿದೆ. ವಿದ್ಯಾರ್ಥಿ ವೇತನ ಸರ್ಕಾರಗಳು ಕೊಡುವ ಭಿಕ್ಷೆಂುಲ್ಲ. ಬದಲಿಗೆ ವಿದ್ಯಾರ್ಥಿಗಳ ಹಕ್ಕು. ಸರ್ಕಾರದ ಈ ವಂಚನೆಂು ವಿರುದ್ಧ ವಾ.1ರಂದು ಬೆಂಗಳೂರಿನಲ್ಲಿ ವಿದ್ಯಾರ್ಥಿವೇತನ ಉಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಎಐಡಿಎಸ್‌ಒ ಪದಾಧಿಕಾರಿಗಳಾದ ಸ್ವಾತಿ, ನಿತಿನ್, ಹೇವಾ, ಚಂದ್ರಕಲಾ, ಚಂದನ, ಚಂದ್ರಿಕಾ, ದಿಶ, ಅಂಜಲಿ, ನಂದೀಶ್, ಅಭಿಷೇಕ್, ರಾಕೇಶ್ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.