ಗಜೇಂದ್ರಗಡದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

GJD PROTEST
Published on

ಗಜೇಂದ್ರಗಡ: ಪಟ್ಟಣದ ಬಸ್ ನಿಲ್ದಾಣದೆದುರು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಎಪಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಟಯರ್​ಗೆ ಬೆಂಕಿ ಹಂಚಿ ಪ್ರತಿಭಟನೆ ನಡೆಸಿದರು.

ಪಟ್ಟಣಕ್ಕೆ ನೂರಾರು ವಿದ್ಯಾರ್ಥಿಗಳು ಹಲವಾರು ಗ್ರಾಮಗಳಿಂದ ಬರುತ್ತಿದ್ದು, ಗುಡೂರ, ಬದಾಮಿ, ಕುಷ್ಟಗಿ-ಇಲಕಲ್ಲ ಮಾರ್ಗಗಳಿಗೆ ಸಮರ್ಪಕ ಸೇವೆ ಇಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದೇವೆ. ಸಮರ್ಪಕವಾಗಿ ಬಸ್ ಸೇವೆ ಒದಗಿಸಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಬಸ್ ನಿಯಂತ್ರಣಾಧಿಕಾರಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ ಮನವಿಗೆ ಸ್ಪಂದಿಸದ ವಿದ್ಯಾರ್ಥಿಗಳು ಅಧಿಕಾರಿಗಳು ಹಾಗೂ ಸರ್ಕಾರ ವಿರುದ್ಧ ಘೊಷಣೆ ಕೂಗಿ ಟಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. 10 ದಿನಗಳೊಳಗಾಗಿ ಎಲ್ಲ ಮಾರ್ಗಗಳಿಗೆ ಸಮರ್ಪಕ ಬಸ್ ಸೇವೆ ಒದಗಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.

ಪ್ರತಿಭಟನೆಯಿಂದಾಗಿ ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅರುಣ ರ್ಬಾ, ರವಿ ನರೇಗಲ್ಲ, ಅಕ್ಷಯ ಇಟಗಿ, ದೇವರಾಜ ಮಡಿವಾಳರ, ನವೀನ ವ್ಯಾಪಾರಿ, ಅಶೋಕ ಜಕ್ಕಲಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net