

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಮಾರ್ಗದರ್ಶಕರ ಕೊರತೆ ಹೆಚ್ಚಾಗಿದ್ದು, ಹೊಸದಾಗಿ ಪಿಎಚ್.ಡಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ತೊಡಕಾಗಿದೆ ಎಂದು ಆರೋಪಿಸಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ ಮತ್ತು ಪಿಎಚ್.ಡಿ ಆಕಾಂಕ್ಷಿಗಳು ವಿಶ್ವವಿದ್ಯಾಲಯ ಮುಂಭಾಗ ಪ್ರತಿಭಟನೆ ನಡೆಯಿತು.
ಕೆ-ಸೆಟ್, ನೀಟ್, ಜೆಆರ್‌ಎಫ್ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡಲು ಅವಕಾಶ ಇಲ್ಲದಂತಾಗಿದೆ. ಆದ್ದರಿಂದ ಈಗಿರುವ ಕಾಯಂ ್ರಾಧ್ಯಾಪಕರ ಬಳಿಯೇ ಮಾರ್ಗದರ್ಶನ ಪಡೆಯಲು ಅವಕಾಶ ಕೊಡಬೇಕು. ಪಿಎಚ್.ಡಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹೆಚ್ಚುವರಿ ಸೀಟುಗಳನ್ನು ನೀಡಿ ಸಂಶೋಧನೆ ಮಾಡಲು ಅವಕಾಶ ನೀಡಬೇಕು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಸಂಶೋಧನಾ ಸಂಘದ ಅಧ್ಯಕ್ಷ ಶಿವಶಂಕರ್, ಪದಾಧಿಕಾರಿಗಳಾದ ವಿಶ್ವ ಪ್ರಸಾದ್, ಉಪಾಧ್ಯಕ್ಷ ಮರಳಿ ಮಹೇಶ್, ರೋಹನ್, ರೋಜಾ ಹಾಗೂ ಇತರರು ಇದ್ದರು.