ಹೊರ ರೋಗಿಗಳ ವಿಭಾಗದ ಗೇಟ್ ಕ್ಲೋಸ್

1LNG02
Published on

ಲಿಂಗಸುಗೂರು: ತಾಲೂಕಿನ ಸರ್ಕಾರಿ ಆಸ್ಪತ್ರೆಗಳು, ನಾನಾ ಕಚೇರಿಗಳು ಮತ್ತು ಶಾಲಾ-ಕಾಲೇಜುಗಳ ನೌಕರರು ಕರ್ತವ್ಯಕ್ಕೆ ಗೈರಾಗಿದ್ದರಿಂದ ರೋಗಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಬುಧವಾರ ಪರದಾಡುವಂತಾಯಿತು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗ್ರಾಮೀಣ ಪ್ರದೇಶದ ರೋಗಿಗಳು ದೌಡಾಯಿಸಿದ್ದರು. ಆದರೆ ಹೊರ ರೋಗಿಗಳ ವಿಭಾಗ ಮುಚ್ಚಿದ್ದರಿಂದ ರೋಗಿಗಳು ಪರದಾಡಿದರು. ಕೆಲವರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದರು. ಪಟ್ಟಣದ ಬಂಗಾರಮ್ಮ ಎಂಬ ವೃದ್ಧೆ ಕಾಲಿನ ಮೂಳೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಕ್ಷ-ಕಿರಣ ಮುಚ್ಚಿರುವುದರಿಂದ ಖಾಸಗಿ ಪ್ರಯೋಗಾಲಯದಿಂದ ವರದಿ ತರುವಂತೆ ವೈದ್ಯ ಸೂಚಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ತುಂಬಿದ್ದರು.

ಎಸಿ, ತಹಸಿಲ್, ತಾಪಂ, ಜಿಪಂ, ಕೃಷಿ, ಬಿಇಒ, ಸಮಾಜ ಕಲ್ಯಾಣ, ಉಪನೋಂದಣಿ, ಪುರಸಭೆ ಸೇರಿ ನಾನಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳ ಸಿ-ವರ್ಗದ ನೌಕರರು ತುರ್ತು ಸೇವೆ ಹೊರತುಪಡಿಸಿ ಮುಷ್ಕರಕ್ಕೆ ಬೆಂಬಲಿಸಿದ್ದರಿಂದ ಬಹುತೇಕ ಕಚೇರಿಗಳು ನೌಕರರಿಲ್ಲದೆ ಬಿಕೋ ಎನ್ನುತ್ತಿದ್ದವು. ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹಾಗೂ ಸಾರ್ವಜನಿಕರು ಕಚೇರಿಗಳಿಗೆ ಬಂದು ಹಿಂದಿರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net