ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಲಿ

15 SANDOOR 01
ಸಂಡೂರು ಎಸ್‌ಆರ್‌ಎಸ್ ಶಾಲೆಯ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಯುಕೆಜಿ ವಿದ್ಯಾರ್ಥಿಗಳಿಗೆ ರಾಜ ವಂಶಸ್ಥೆ ಸೂರ್ಯಪ್ರಭಾ ಅಜಯ್ ಘೋರ್ಪಡೆ ಪದವಿ ಪ್ರದಾನ ಶುಕ್ರವಾರ ಮಾಡಿದರು.
Published on

ಸಂಡೂರು: ಪ್ರಾಥಮಿಕ ಪೂರ್ವ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರತರುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ರಾಜ ವಂಶಸ್ಥೆ ಸೂರ್ಯಪ್ರಭಾ ಅಜಯ್ ಘೋರ್ಪಡೆ ಹೇಳಿದರು.

ಪಟ್ಟಣದ ಎಸ್‌ಆರ್‌ಎಸ್ ಶಾಲೆಯ ಗೋಲ್ಡನ್ ಜುಬಿಲಿ ಹಾಲ್‌ನಲ್ಲಿ ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಪಾಲಕರು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದರು. ಶಿವಪುರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಆಸಿಯಾ ಬಾನು ಅವರೊಂದಿಗೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಯುಕೆಜಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರಾಂಶುಪಾಲ ಅವಿನಾಶ್ ತ್ಯಾಗಿ, ಬಾಲ ಭವನದ ಶಿಕ್ಷಕಿಯರಾದ ಪ್ರೆಸಿಲ್ಲಾ, ವಿನುತಾ, ರಷೀದಾ, ಅನಿತಾ, ದೀಪಾ ಮತ್ತು ಕೆ.ಎಚ್.ಮಂಜುಳಾ, ಪ್ರತಿಭಾ ಜಿರಗಿ ಇತರರಿದ್ದರು. ವಿದ್ಯಾರ್ಥಿಗಳಾದ ಬಾಲಾಜಿ ಮತ್ತು ಸಾಹಿತ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net