ಅಮ್ಮನ ಹೆಸರಿನಲ್ಲಿ ಸಸಿ ನೆಟ್ಟ ವಿದ್ಯಾರ್ಥಿಗಳು

07BTP01
ಬೆಟ್ಟದಪುರ ಸಮೀಪದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಿದರು. ಮುಖ್ಯಶಿಕ್ಷಕರಾದ ನಾಗಶೆಟ್ಟಿ, ರಮೇಶ್, ಶಿಕ್ಷಕರಾದ ದೇವರಾಜ, ಸ್ವಾಮಿ, ಮಾದನಾಯಕ್, ಚೆಲುವರಾಜ್, ರವಿ, ಪುಷ್ಪಲತಾ, ಇಂದ್ರಮ್ಮ ಇತರರು ಇದ್ದರು.
Published on

ಬೆಟ್ಟದಪುರ: ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ ಎನ್‌ಎಸ್‌ಎಸ್ ಘಟಕ ಮತ್ತು ಇಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಗುರುವಾರ ವಿಶ್ವ ಪರಿಸರ ದಿನವನ್ನು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸಸಿ ನೆಡುವ ಮೂಲಕ ಆಚರಿಸಿದರು.

ಶಾಲಾ ಕೈತೋಟದಲ್ಲಿ ಪಪ್ಪಾಯ, ನುಗ್ಗೆ, ತರಕಾರಿ ಗಿಡಗಳನ್ನು ನೆಟ್ಟು ಮತ್ತು ಸೊಪ್ಪಿನ ಬೀಜಗಳು ಹಾಕಿ ವಿದ್ಯಾರ್ಥಿಗಳು ಖುಷಿಪಟ್ಟರು. ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ತಾಯಂದಿರ ಹೆಸರಲ್ಲಿ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸಿ ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಕ ನಾಗಶೆಟ್ಟಿ ಸಲಹೆ ನೀಡಿದರು.

ಮುಖ್ಯಶಿಕ್ಷಕರಾದ ನಾಗಶೆಟ್ಟಿ, ರಮೇಶ್, ಶಿಕ್ಷಕರಾದ ದೇವರಾಜ, ಸ್ವಾಮಿ, ಮಾದನಾಯಕ್, ಚೆಲುವರಾಜ್, ರವಿ, ಪುಷ್ಪಲತಾ, ಇಂದ್ರಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net